ಮಂಗಳೂರು: ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್ ನಡಿಯಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಬಹುನಿರೀಕ್ಷಿತ “ಅಬತರ” ತುಳು ಸಿನಿಮಾ ಗುರುವಾರ ನಗರದ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ಅಥಿತಿ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ್ದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ದೇವಡಿಗರ ಸಂಘದ ಮಾಜಿ ಅಧ್ಯಕ್ಷ ಡಾ. ದೇವರಾಜ್. ಕೆ ಇವರು, ತುಳು ರಂಗಭೂಮಿ ಇಂದು ಬಹಳಷ್ಟು ಬೆಳೆದಿದೆ. ರಂಗಭೂಮಿಯ ಕಲಾವಿದರು ಅಭಿನಯಿಸುವ ತುಳು ಚಿತ್ರಗಳು ಇಂದು ಹಿಟ್ ಮೇಲೆ ಹಿಟ್ ಆಗುತ್ತಿವೆ. ತುಳು ಸಿನಿಮಾಗಳ ಪರ್ವಕಾಲ ಇದಾಗಿದ್ದು ಪ್ರತಿಯೊಬ್ಬರೂ ಚಿತ್ರ ನೋಡಿ ಬೆಂಬಲ ನೀಡುತ್ತಿರುವುದು ಖುಷಿಯ ವಿಚಾರ. ಅಬತರ ಸಿನಿಮಾ ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿಯೂ ಯಶಸ್ಸು ಕಾಣಲಿ. ಎಲ್ಲರೂ ಸಿನಿಮಾ ನೋಡಿ ಇಡೀ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕು” ಎಂದರು.
ಬಳಿಕ ಮಾತಾಡಿದ ಚಿತ್ರ ನಿರ್ದೇಶಕ, ನಟ ದೇವದಾಸ್ ಕಾಪಿಕಾಡ್ ಅವರು, “ಅಬತರ ಸಿನಿಮಾ ತುಂಬಾ ಇಷ್ಟಪಟ್ಟು ಮಾಡಿದ್ದೇವೆ. ಇಂದಿನವರೆಗೆ ನಾವು ಮಾತಾಡಿದ್ದೇವೆ ಇನ್ನು ಮುಂದೆ ತುಳುವರಿಗೆ ನೀಡಿರುವ ನಮ್ಮ ಸಿನಿಮಾ ಮಾತಾಡಬೇಕು. ಮೊದಲ ಶೋ ಅನ್ನು ದೇವರ ಸ್ವರೂಪವಾದ ಮಕ್ಕಳಿಗೆ ತೋರಿಸಿದ್ದೇವೆ. ಅವರ ಖುಷಿಯಲ್ಲಿ ಪಾಲು ಪಡೆದಿರುವುದು ನಮಗೆ ಹೆಮ್ಮೆಯ ವಿಷಯ” ಎಂದರು.
ಬಳಿಕ ಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಅರ್ಜುನ್ ಕಾಪಿಕಾಡ್, ದೇವದಾಸ್ ಕಾಪಿಕಾಡ್ ಗರಡಿಯಲ್ಲಿ ಪಳಗಿದವರು. ಸಿನಿಮಾರಂಗದ ಬಗ್ಗೆ ಅವರಿಗೆ ಅನುಭವ ಇದೆ. ಸಿನಿಮಾ ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಸಿನಿಮಾದಲ್ಲಿ ಮನರಂಜನೆ ಇದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಮೂಡಿ ಬಂದಿದೆ. ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದರು. ನಟರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ಚಿತ್ರದ ಬಗ್ಗೆ ಮಾತಾಡಿದರು.
ವೇದಿಕೆಯಲ್ಲಿ ಲಕ್ಷ್ಮೀಶ್ ಭಂಡಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಕಾರ್ಪೋರೇಟರ್ ಕಿರಣ್ ಕೋಡಿಕಲ್, ಕಿಶೋರ್ ಕೊಟ್ಟಾರಿ, ರಾಕೇಶ್, ನಾಯಕ ನಟ ಅರ್ಜುನ್ ಕಾಪಿಕಾಡ್, ಚಿತ್ರ ನಿರ್ಮಾಪಕಿ ಶರ್ಮಿಳಾ ಡಿ ಕಾಪಿಕಾಡ್, ನಾಯಕಿ ನಟಿ ಗಾನ ಭಟ್, ನಟ ಸಾಯಿಕೃಷ್ಣ, ಪ್ರಮುಖರಾದ ಪ್ರಮೋದ್ ಬಲ್ಲಾಳ್ ಬಾಗ್, ಸುರೇಶ್ಚಂದ್ರ ಶೆಟ್ಟಿ, ಶೇಖರ ಶೆಟ್ಟಿ, ಅನಿಲ್ ಸಾಲಿಯಾನ್, ನಿಖಿಲ್ ಸಾಲ್ಯಾನ್, ವೀರಾಜ್ ಅತ್ತಾವರ, ಆನಂದ್ ಬಂಗೇರ, ದಿನೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸುರೇಂದ್ರ ಬಂಗೇರ, ರಕ್ಷಿತ್ ಕೊಟ್ಟಾರಿ, ಗಿರೀಶ್ ಎಂ ಶೆಟ್ಟಿ ಕಟೀಲು , ಪ್ರಕಾಶ್ ಶೆಟ್ಟಿ ಧರ್ಮನಗರ, ಮೋಹನ್ ಕೊಪ್ಪಳ, ಜಗನ್ನಾಥ ಶೆಟ್ಟಿ ಬಾಳ, ಅನೂಪ್ ಸಾಗರ್, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಅಬತರ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್, ಸಿನಿಪೊಲಿಸ್, ಪಿವಿಆರ್, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್ ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ. ಒಟ್ಟು 15 ಚಿತ್ರ ಮಂದಿರಗಳಲ್ಲಿ ಸಿನಿಮಾ ಏಕ ಕಾಲಕ್ಕೆ ತೆರೆ ಕಂಡಿದೆ.
ಅಬತರ ಹಾಸ್ಯ ಸಿನಿಮಾದ ಕತೆಯನ್ನು ಡಾ ದೇವದಾಸ್ ಕಾಪಿಕಾಡ್ ರಚಿಸಿ, ಅಭಿನಯಿಸಿ ತುಳುನಾಡ ಏಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಅಭಿನಯದ ಜೊತೆಗೆ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
ತಾರಾಗಣದಲ್ಲಿ ನವೀನ್ ಡಿ ಪಡಿಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಶನಿಲ್ ಗುರು, ಚೇತನ್ ರೈ ಮಾಣಿ, ಲಕ್ಷ್ಮೀಶ್, ಸುನಿಲ್ ಚಿತ್ರಾಪುರ ಮತ್ತು ನಾಯಕನಟಿಯಾಗಿ ಗಾನ ಭಟ್, ಕ್ರಿಸ್ಟಿನಾ ನಟಿಸಿದ್ದಾರೆ.
ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್, ಜೇಕೋಬ್, ಕಾರ್ಯಕಾರಿ ನಿರ್ಮಾಪಕರಾಗಿ ಸಂದೀಪ್ ಶೆಟ್ಟಿ ಕೆಲಸ ಮಾಡಿದ್ದಾರೆ. ನಿಖಿಲ್ ಸಾಲ್ಯಾನ್ ನಿರ್ಮಾಪಕರಾಗಿದ್ದು, ವೀರಾಜ್ ಅತ್ತಾವರ ಸಹ ನಿರ್ಮಾಪಕರಾಗಿದ್ದಾರೆ.
Comments are closed.