ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠದಲ್ಲಿ ಗೋಸೂಕ್ತ ಹವನ ನಡೆದು, ನಂತರ ಧಾರ್ಮಿಕ ಸಭೆಯು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಶ್ರೀಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣರವರ ದಿವ್ಯ ಉಪಸ್ಥಿತಿಯಲ್ಲಿ, ರಾಜ್ಯಸಭಾ ಸದಸ್ಯರಾದ ಬೆಂಗಳೂರಿನ ಶ್ರೀ ಕೆ.ನಾರಾಯಣ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆಶ್ರಮ ಸ್ಥಾಪನೆಯ 20ನೇ ವರ್ಷದ “ ವಿಂಶತಿ ಕಾರ್ಯಕ್ರಮ ಲಾಂಛನವನ್ನು ನಾರಾಯಣ್ ಬಿಡುಗಡೆಗೊಳಿಸಿದರು. ಬೆಂಗಳೂರಿನ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಮೇಶ್ ರಾಜು ‘ಸುರಭಿ-ಗೋಶಾಲೆ’ಗೆ ಶಿಲಾನ್ಯಾಸ ನೆರವೇರಿಸಿ, ಶಿಲಾಫಲಕ ಅನಾವರಣಗೊಳಿಸಿದರು.
ಪೂನಾದ ಸಂತೋಷ್ ಶೆಟ್ಟಿಯವರು ಆಶ್ರಮದ ‘ಆಶ್ರಯ ಯೋಜನೆ’ಯ 34ನೇ ಮನೆಯ ಕೀಲಿಯನ್ನು ಫಲಾನುಭವಿ ರಾಧಾ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದದಲ್ಲಿ ಬೆಂಗಳೂರಿನ ಮಾಜಿ ರಾಜ್ಯಸಭಾ ಸದಸ್ಯ ಡಾ.ಕೆ.ಸಿ. ರಾಮಮೂರ್ತಿ ರವರ ಸಾಮಾಜಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಆಸ್ರಣ್ಣರವರು ಕೊಂಡೆವೂರಿನಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ಸಮಾಜವನ್ನು ಒಂದಾಗಿ ಬೆಸೆಯುತ್ತಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಶ್ರೀಗಳು ತಮ್ಮ ಆಶೀರ್ವಚನದಲ್ಲಿ ‘ನಾವು 33 ದೇವತೆಗಳ ಆವಾಸಸ್ಥಾನವಾದ ಗೋಮಾತೆಯ ಸೇವೆ ಮಾಡುತ್ತ ನಮ್ಮ ಸಂಸ್ಕøತಿಯ ರಕ್ಷಣೆ ಮಾಡೋಣ ಎಂದರಲ್ಲದೆ, ಈವತ್ತು ಶಿಲಾನ್ಯಾಸವಾದ ಸುರಭಿ ಗೋಶಾಲೆಗಾಗಿ ಸ್ಥಳ ಖರೀದಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಯಷ್ಟು ಅಂದಾಜಿಸಲಾಗಿದ್ದು ಗೋಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿ,ಯೋಜನೆಯ ಯಶಸ್ಸಿಗೆ ಪಾಲುದಾರರಾಗಬೇಕೆಂದು ಕರೆನೀಡಿದರು.
ಮುಖ್ಯ ಅತಿಥಿಗಳಾಗಿ ಹಿಂದೂಪರ ಸಂಘಟನೆಮುಖಂಡ ಪ್ರೇಮಾನಂದ ಶೆಟ್ಟಿ ಕುಂದಾಪುರ, ಗೋಪಿನಾಥ ಕಾಮತ್ ಸಿದ್ಧಾಪುರ ಮಾತನಾಡಿದರು. ಶಶಿವರಾಮ ಪಕಳ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಬೆಂಗಳೂರಿನ ಸತೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಾಯತ್ರೀ, ಶ್ರಾವಣ್ಯ, ಭೂಮಿಕಾ ಪ್ರಾರ್ಥಿಸಿದರು. ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿಯವರು ಸ್ವಾಗತಿಸಿದರು. ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ವಂದಿಸಿದರು.
Comments are closed.