ಕರಾವಳಿ

ಝೊಮ್ಯಾಟೋ ಫುಡ್‌ ಡೆಲಿವರಿ ಬ್ಯಾಗ್‌ನಲ್ಲಿ ಗಾಂಜಾವಿಟ್ಟುಕೊಂಡು ಮಾರಾಟಕ್ಕೆ ಯತ್ನ; ಮೂವರ ಬಂಧನ

Pinterest LinkedIn Tumblr

ಉಡುಪಿ: ಝೊಮ್ಯಾಟೋ ಫ‌ುಡ್‌ ಡೆಲಿವರಿ ಬ್ಯಾಗ್‌ನಲ್ಲಿ ಗಾಂಜಾವಿಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಸೆನ್‌ ಅಪರಾಧ ಠಾಣಾ ಪೊಲೀಸರು ಶನಿವಾರ ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಬಂಧಿಸಿ ಆರೋಪಿಗಳಿಂದ ಸುಮಾರು 1 ಕೆ.ಜಿ. 277 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ರವಿ ಶಂಕರ್‌, ಅಂಜಲ್‌ ಬೈಜು ಹಾಗೂ ದೇವಿಪ್ರಸಾದ್‌ ಬಂಧಿತ ಆರೋಪಿಗಳು. ರವಿಶಂಕರ್‌ ಕೇರಳದ ಪಾಲಕ್ಕಾಡ್‌ನಿಂದ ಗಾಂಜಾವನ್ನು ರೈಲಿನ ಮೂಲಕ ಉಡುಪಿಗೆ ಸಾಗಿಸಿ ಉಡುಪಿಯಲ್ಲಿ ವಿತರಿಸುತ್ತಿದ್ದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈತ ಮಣಿಪಾಲ ಸಮೀಪದ ಮಂಚಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಸ್ನೇಹಿತರೊಂದಿಗೆ ಉಳಿದುಕೊಂಡಿದ್ದನು. ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಮೂವರು ಆರೋಪಿಗಳು ಝೊಮ್ಯಾಟೋ ಫ‌ುಡ್‌ ಡೆಲಿವರಿ ಬ್ಯಾಗ್‌ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಗಿರಾಕಿ ಹಾಗೂ ಪೆಡ್ಲರ್‌ಗಳಿಗೆ ಕಾಯುತ್ತಿದ್ದರು. ಖಚಿತ ಮಾಹಿತಿಯಂತೆ ಪೋಲಿಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 2 ಬೈಕ್‌ , ಝೊಮ್ಯಾಟೋ ಫ‌ುಡ್‌ ಡೆಲಿವರಿ ಬ್ಯಾಗ್‌, 4 ಮೊಬೈಲ್‌ ಫೋನ್‌ ಮತ್ತು ಮೂವತ್ತು ಸಾವಿರ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,37,000 ರೂ. ಎಂದು ಅಂದಾಜಿ ಸಲಾಗಿದೆ. ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.