(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಇವರ ಜಂಟಿ ಆಶ್ರಯದಲ್ಲಿ ಪದವಿ ಪೂರ್ವ ವಿಭಾಗದ ಬಾಲಕ-ಬಾಲಕಿಯರ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ-2022 ಕೆರಾಡಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ನಡೆಯಿತು. ಕೆರಾಡಿ ಗ್ರಾ.ಪಂ ಅಧ್ಯಕ್ಷೆ ಗಿರಿಜಾ ಶೆಡ್ತಿ ಕಾರ್ಯಕ್ರಮ ಉದ್ಘಾಟಿಸಿದರು. ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಸಂಚಾಲಕ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಗಣ್ಯರು ಉಪಸ್ಥಿತರಿದ್ದರು.
(ಬಾಲಕರ ವಿಭಾಗ ಪ್ರಥಮ- ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ)
(ಬಾಲಕಿಯರ ವಿಭಾಗ- ಸರಕಾರಿ ಪದವಿ ಪೂರ್ವ ಕಾಲೇಜು ಹಾಲಾಡಿ)
ಸಮಾರೋಪ
ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಜೆ ಸಮಾರೋಪ ಜರುಗಿತು. ಈ ಸಂದರ್ಭದಲ್ಲಿ ಕೆರಾಡಿ ಗ್ರಾ.ಪಂ ಸದಸ್ಯರಾದ ರಾಘವೇಂದ್ರ ಕೊಠಾರಿ, ಮಂಜು ಕೊಠಾರಿ, ದಿನೇಶ್ ನಾಯ್ಕ್, ಕುಂದಾಪುರ ತಾಲೂಕು ಕ್ರೀಡಾಕೂಟದ ಸಂಚಾಲಕ ರಾಮ ಶೆಟ್ಟಿ, ಉದ್ಯಮಿ ಅಶ್ವಥ್ ಶೆಟ್ಟಿ ಕೆರಾಡಿ, ವರಸಿದ್ಧಿ ಸೇವಾ ಸಂಸ್ಥೆಯ ರವಿ ಕೊಠಾರಿ, ಭಾಸ್ಕರ ಶೆಟ್ಟಿ, ಸತೀಶ್, ಅಶೋಕ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರು ಮೊದಲಾದವರಿದ್ದರು.
ಸಂಸ್ಥೆಯ ಕನ್ನಡ ಉಪನ್ಯಾಸಕ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕ ವಿಶ್ವನಾಥ್ ವಂದಿಸಿದರು.
ಫಲಿತಾಂಶ
ಪದವಿ ಪೂರ್ವ ಕಾಲೇಜು ಬಾಲಕರ ವಿಭಾಗದಲ್ಲಿ
ಪ್ರಥಮ– ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜು ಕುಂದಾಪುರ
ದ್ವಿತೀಯ– ಸರಕಾರಿ ಪದವಿಪೂರ್ವ ಕಾಲೇಜು ಹಾಲಾಡಿ
ಪದವಿ ಪೂರ್ವ ಕಾಲೇಜು ಬಾಲಕಿಯರ ವಿಭಾಗದಲ್ಲಿ
ಪ್ರಥಮ– ಸರಕಾರಿ ಪದವಿ ಪೂರ್ವ ಕಾಲೇಜು ಹಾಲಾಡಿ
ದ್ವಿತೀಯ– ಸರಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲಕಟ್ಟೆ
ಉತ್ತಮ ಆಟಗಾರ– ಸಂದೀಪ್, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು
ಉತ್ತಮ ಆಟಗಾರ್ತಿ– ತ್ರಿಶಾ, ಹಾಲಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು
Comments are closed.