ಕರಾವಳಿ

ಗಂಗೊಳ್ಳಿಯಲ್ಲಿ ಜೆಟ್ಟಿ ಕುಸಿತ; ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ ಸಿದ್ದರಾಮಯ್ಯ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಬಂದರು ಜೆಟ್ಟಿ ಕಾಮಗಾರಿಯಲ್ಲಿ ಗುತ್ತಿಗೆದಾರ ಬಿಜೆಪಿ ಸರ್ಕಾರಕ್ಕೆ ಕೊಟ್ಟ ಕಮಿಷನ್ ಎಷ್ಟು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಅವರು, “ರಾಜ್ಯದ #40Percent ಕಮಿಷನ್ ಸರ್ಕಾರ ಇಂದು ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ‌‌ ಮುಳುಗಿದೆ”.

“12 ಕೋಟಿ ರುಪಾಯಿ ವೆಚ್ಚದ ಜಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರಿನ ಪಾಲಾಗಿದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ BJP Karnataka ಗೆ ನೀಡಿದ್ದ ಕಮಿಷನ್ ಎಷ್ಟು? ಎನ್ನುವ ಬಗ್ಗೆ ತನಿಖೆಯಾಗಲಿ. Kota Srinivas Poojary S Angara Sullia ಎಂದು ಬರೆದುಕೊಂಡಿದ್ದಾರೆ.

12 ಕೋಟಿ ವೆಚ್ಚದ ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿನ ಜೆಟ್ಟಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಸಿದ ಘಟನೆ ಬುಧವಾರ ನಡೆದಿತ್ತು.

Comments are closed.