ಮಂಗಳೂರು: ಅತಿಥಿ ಸೇವೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ಓಶಿಯನ್ ಪರ್ಲ್ ಉಜಿರೆಯಲ್ಲಿ ಸೆ.30ರಂದು ತನ್ನ 5ನೇ ಶಾಖೆಯನ್ನು ತೆರೆಯಲಿದೆ. ಇದರ ಕಟ್ಟಡವನ್ನು ತಾಯಿ ಕಾಶಿ ಶೆಟ್ಟಿ ಹೆಸರಿನಲ್ಲಿ ನಿರ್ಮಿಸಲಾಗಿದ್ದು ಕಾಶಿ ಪ್ಯಾಲೇಸ್ ಹೆಸರಿನಲ್ಲಿ ಸುಸಜ್ಜಿತ ಹೋಟೆಲ್ ನಿರ್ಮಾಣ ಮಾಡಲಾಗಿದೆ ಎಂದು ಶಶಿ ಕೇಟರರ್ಸ್ ಪ್ರೈ. ಲಿ. ಮಾಲಕ ಶಶಿಧರ್ ಶೆಟ್ಟಿ ಬರೋಡಾ ಹೇಳಿದರು.
30 ವರ್ಷಗಳಿಂದ ಗುಜರಾತ್ ನಲ್ಲಿ ಕೇಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು ಊರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಹೋಟೆಲ್ ಉದ್ಯಮ, ವಸತಿ ಸೌಲಭ್ಯ ಪ್ರಾರಂಭಿಸುವ ಉದ್ದೇಶದಿಂದ ತಾಯಿ ಹೆಸರಲ್ಲಿ ಸಂಸ್ಥೆ ನಿರ್ಮಾಣ ಮಾಡಿದ್ದಾಗಿ ಅವರು ಹೇಳಿದರು.
ಬಳಿಕ ಮಾತಾಡಿದ ಓಶಿಯನ್ ಪರ್ಲ್ ಉಪಾಧ್ಯಕ್ಷ ಗಿರೀಶ್ . ಎನ್ ಅವರು, “ಓಶಿಯನ್ ಪರ್ಲ್ ಹೋಟೆಲ್ಸ್ ಪೈ, ಲಿಮಿಟೆಡ್ ಸಂಸ್ಥೆ ಈಗಾಗಲೇ ರಾಜ್ಯದಲ್ಲಿ ನಾಲ್ಕು ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ ದಿ. ಓಶಿಯನ್ ಪರ್ಲ್, ಮಂಗಳೂರು, ದಿ ಓಶಿಯನ್ ಪರ್ಲ್, ಉಡುಪಿ ಮತ್ತು ದಿ ಓಶಿಯನ್ ಪರ್ಲ್ ಇನ್, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ದಿ ಓಶಿಯನ್ ರೆಸಾರ್ಟ್ ಮತ್ತು ಸ್ಪಾ. ಇದೀಗ ತಮ್ಮ 5ನೇ ಶಾಖೆಯನ್ನು ಉಜಿರೆಯಲ್ಲಿ ಆರಂಭಿಸಲು ಹೆಮ್ಮೆಪಡುತ್ತಿದೆ ಎಂದರು.
ಸಂಸ್ಥೆಯ ಮಾಲಕರಾದ ಜಯರಾಮ್ ಬನಾನ ಅವರು ದೆಹಲಿಯಿಂದ ವೈಷ್ಣೋದೇವಿ ತನಕ 150 “ಸಾಗರ್ ರತ್ನ” ರೆಸ್ಟೋರೆಂಟ್ ಸ್ಥಾಪಿಸಿದ್ದು ಇದರಲ್ಲಿ 70%ದಷ್ಟು ಉದ್ಯೋಗಿಗಳು ನಮ್ಮ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ. ಸಂಸ್ಥೆ 11000 ಮಂದಿಗೆ ಉದ್ಯೋಗ ನೀಡಿದ್ದು ಉಜಿರೆಯಲ್ಲಿ ನೂತನ ಹೋಟೆಲ್ ಆರಂಭಿಸಲು ಹೆಮ್ಮೆಯಾಗುತ್ತಿದೆ” ಎಂದರು.
“3 ಮಹಡಿಗಳ ಐಷಾರಾಮಿ ಹೋಟೆಲ್ ಇದಾಗಿದ್ದು 34 ಕೊಠಡಿಗಳನ್ನು ಹೊಂದಿದೆ. ಇದರಲ್ಲಿ 34 ರೂಮ್‌ಗಳಿದ್ದು, 31 ಎಕ್ಸಿಕ್ಯೂಟಿವ್ ಸೂಟ್ ರೂಮ್‌ಗಳು, 2 ಸೂಟ್ ರೂಮ್‌ಗಳು ಮತ್ತು 1 ಪ್ರೆಸಿಡೆಂಟ್ ಸೂಟ್ ರೂಮ್ ಅನ್ನು ಹೊಂದಿದೆ. ‘ಪೆಸಿಫಿಕ್’ನಲ್ಲಿ ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಅತ್ಯಾಧುನಿಕ ಕಾನ್ಸರೆನ್ಸ್ ಹಾಲ್, ‘ಸಾಗರ ರತ್ನ’ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್ 140 ಮಂದಿಯ ಆಸನ ವ್ಯವಸ್ಥೆಯ ಸಾಮರ್ಥ್ಯ ಹೊಂದಿದ್ದು 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಕೋರಲ್ ಅನ್ನು ಹೊಂದಿದೆ. ಇಂದಿನ ಪೀಳಿಗೆಯ ಜನರ ಗುಣಮಟ್ಟದ ಜೀವನಕ್ಕೆ ಮತ್ತು ತಮ್ಮ ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ.
ಪತ್ರಿಕಾಗೋಷ್ಟಿಯಲ್ಲಿ ಪ್ರಾಜೆಕ್ಟ್ ಜಿ.ಎಂ ಶಿವಕುಮಾರ್, ಹೋಟೆಲ್ ಓಶಿಯನ್ ಪರ್ಲ್ ಉಜಿರೆ ಇದರ ಜಿ.ಎಂ ನಿತ್ಯಾನಂದ ಮುಂಡಾಲ್ ಉಪಸ್ಥಿತರಿದ್ದರು.
Comments are closed.