ಭಟ್ಕಳ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪರಿಶೀಲನೆ ಮತ್ತು ಇತರ ವಿಚಾರಗಳ ಚರ್ಚೆಗೆ ಆಗಮಿಸಿದ್ದರು.
ಮಂಗಳವಾರ ರಾತ್ರಿ ಸುನಿಲ್ ನಾಯ್ಕ್ ಅವರ ಭಟ್ಕಳದ ಮನೆಯಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಡಾ. ಸುಧಾಕರ್ ಅವರು ಅಲ್ಲಿಗೆ ಭೇಟಿ ನೀಡಿದ್ದರು. ತುಂಬ ಹೊತ್ತು ಕುಳಿತು ಯಕ್ಷಗಾನವನ್ನು ಆಸ್ವಾದಿಸಿದ ಸಚಿವರು ಬಳಿಕ ವೇಷಧಾರಿಯಾಗಲು
ಸಮ್ಮತಿಸಿದರು.
ವೇಷ ಧರಿಸಿ ಕಿರೀಟ ತೊಟ್ಟು ವೇದಿಕೆಗೆ ಬಂದಾಗ ಚಪ್ಪಾಳೆಗಳ ಸುರಿಮಳೆಯೇ ಬಂದಿತು.ಇತರ ವೇಷಧಾರಿಗಳು ಕೂಡಾ ಬಂದು ಫೋಟೊ ತೆಗೆಸಿಕೊಂಡರು. ಯಕ್ಷಗಾನ ವೇಷಧಾರಿಯಾದ ಸಚಿವ ಸುಧಾಕರ್ ಅವರನ್ನು ಸನ್ಮಾನ ಕೂಡಾ ಮಾಡಲಾಯಿತು.
Comments are closed.