ಕರಾವಳಿ

ಹುಟ್ಟಿನಿಂದಲೇ ದಣಿ, ಬಳಿಕ ಲೀಡರ್ ಆಗಿದ್ದ ನಾನೀಗ ಸೇವಕ: ಬಿ.ಎಂ ಸುಕುಮಾರ ಶೆಟ್ಟಿ (Video)

Pinterest LinkedIn Tumblr

 

ಕುಂದಾಪುರ: ಹುಟ್ಟಿನಿಂದಲೇ ನಾನು ದಣಿ. ಶಾಲೆ- ಕಾಲೇಜಿಗೆ ಹೋಗುವಾಗಲೇ ಲೀಡರ್. ಕುಂದಾಪುರ ಹೈಸ್ಕೂಲ್ ಹೋಗುವಾಗಲೇ ಟಿಸಿ ಕೊಟ್ಟಿದ್ದರು. ಬಳಿಕ ನಾನು ಸಾಹುಕಾರ್ ಆದೆ..1600-1700 ಜನ ಕೆಲಸಕ್ಕಿದ್ದರು ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಎಲ್ಲೂರು ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ವಿ. ಸುನೀಲ್ ಕುಮಾರ್ ಅವರಿದ್ದ ವೇದಿಕೆಯಲ್ಲಿ ಬಾಲ್ಯ, ಉದ್ಯೋಗ ಹಾಗೂ ರಾಜಕೀಯ ಜೀವನದ ಮಜಲುಗಳ ಬಗ್ಗೆ ಮಾತನಾಡಿದರು.

ಸಾಹುಕಾರ್, ಲೀಡರ್, ದಣಿ ಎಲ್ಲವು ಆದ ನಾನು ಈಗ ಸೇವಕನಾಗಿರುವೆ. ಸೇವಕನಾದರೂ ಕೂಡ ಜನರಿಗೆ ಸಮಾಧಾನವಿಲ್ಲ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡಿದರೆ ಜನ ಮೆಚ್ಚುತ್ತಾರೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಎಷ್ಟೂ ಕೆಲಸ ಮಾಡಿದರೂ ಜನರು ತೃಪ್ತಿ ಪಡಲ್ಲ. ಇಡೀ ಕರಳು ಕತ್ತರಿಸಿ ಕೊಟ್ಟರು ಸಮಾಧಾನವಿಲ್ಲದ ಪರಿಸ್ಥಿತಿ ರಾಜಕೀಯದಲ್ಲಿದೆ ಎಂದವರು ಹೇಳಿದ್ದಾರೆ.

 

 

 

Comments are closed.