ಕರಾವಳಿ

ಕುಂಭಾಶಿ ಮಕ್ಕಳ ಮನೆಯಲ್ಲಿ ಸಂಭ್ರಮದ ದೀಪಾವಳಿ ‘ಬೊಲ್ಪು 2022’

Pinterest LinkedIn Tumblr

ಕುಂದಾಪುರ: ದೀಪ ಎಂದರೆ ಬೆಳಕು. ನಾವು ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವುದು ಅಂದರೆ ಉನ್ನತ ಶಿಕ್ಷಣವನ್ನು ಪಡೆದು ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವುದೇ ಬೆಳಕು ಎಂದು ಕುಂದಾಪುರದ ವೈದ್ಯಾಧಿಕಾರಿ ಡಾ.ಸನ್ಮಾನ ಶೆಟ್ಟಿ ಹೇಳಿದರು.

ಕುಂಭಾಶಿಯ ಮಕ್ಕಳ ಮನೆಯಲ್ಲಿ ನಡೆದ ‘ಬೊಲ್ಪು 2022 ದೀಪಗಳ ಸಾಲು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೊರಗ ಮುಖಂಡರಾದ ಗಣೇಶ್ ಬಾರ್ಕೂರು, ಶೇಖರ್ ಮರವಂತೆ, ಲಕ್ಷ್ಮಣ್ ಬೈಂದೂರು, ಕೋಟ ಗ್ರಾಮ ಪಂಚಾಯತ್ ಸದಸ್ಯೆ ಸೀತಾ, ಮಹಾಬಲ ಕೋಟ ಉಪಸ್ಥಿತರಿದ್ದರು.

ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಕುಂದಾಪುರ ಸಾಗತಿಸಿ, ಲಕ್ಷ್ಮಣ್ ಬೈಂದೂರು ವಂದಿಸಿದರು.

ಸಂಭ್ರಮದ ದೀಪಾವಳಿ..!
ಪ್ರಕೃತಿ ಪೂಜೆ, ಗೋಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು ನಿತ್ಯ ಬಳಕೆಯ ಕತ್ತಿ, ಬುಟ್ಟಿ ಹಾಗೂ ಡೋಲಿಗೆ ಪೂಜೆ ಮಾಡಲಾಯಿತು. ಇಡೀ ಕಾರ್ಯಕ್ರಮದಲ್ಲಿ ಕಾಡು ಹೂಗಳನ್ನು ಬಳಸಲಾಗಿದ್ದು ಮಾರುಕಟ್ಟೆಯ ಹೂ ಬಳಸಲಾಗಿಲ್ಲ. ಸಭಾ ಕಾರ್ಯಕ್ರಮ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು ಸುಡುಮದ್ದು ಪ್ರದರ್ಶನ ನೆರೆದವರನ್ನು ರಂಜಿಸಿತು. ಮಕ್ಕಳ ಮನೆಯ ವಿದ್ಯಾರ್ಥಿಗಳು, ಕೊರಗ ಸಮುದಾಯದವರು ಸಹಿತ 200 ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ದೀಪದ ಬೆಳಕಿನಲ್ಲಿ ಸಾಮೂಹಿಕ ಭೋಜನಕೂಟ ನಡೆಯಿತು.

Comments are closed.