ಕರಾವಳಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರಿಗೆ ಅದ್ಧೂರಿ ಸ್ವಾಗತ; ನ.5 ಹುಟ್ಟೂರ ಸನ್ಮಾನಕ್ಕೆ ಸಿದ್ಧತೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಉಡುಪಿ ಜಿಲ್ಲೆಯ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಹೊರನಾಡು ಕನ್ನಡಿಗ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ನೀಡಿದ್ದು ಮಂಜರು ತೆಲಂಗಾಣದಲ್ಲಿ ಹೋಟೆಲ್ ಉದ್ಯಮಿಯಾಗಿದ್ದಾರೆ. ಜಿಲ್ಲೆಯಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಅವರು ತೆಲಗು ನಾಡಿನಲ್ಲಿಯೂ ಕನ್ನಡದ ಕಂಪು ಪಸರಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರದ ಬಳಿಕ ಬುಧವಾರ ಬೆಳಿಗ್ಗೆ ಹುಟ್ಟೂರಿಗೆ ಆಗಮಿಸಿದ ಕೃಷ್ಣಮೂರ್ತಿ ಮಂಜ ಅವರನ್ನು ಗ್ರಾಮಸ್ಥರು, ಹಿತೈಷಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಚಿತ್ತೂರಿನಲ್ಲಿ ಅವರಿಗೆ ಸ್ವಾಗತಿಸಲಾಗಿದ್ದು ನಂತರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಳಕ್ಕೆ ಕುಟುಂಬ‌ ಸಹಿತ ಭೇಟಿ ಮಾಡಿ ಪೂಜೆ ಸಲ್ಲಿಸಿದ ಕೃಷ್ಣಮೂರ್ತಿ ಮಂಜರು, ಮಾಧ್ಯಮಗಳ ಜೊತೆ ಮಾತನಾಡಿ ದುಡಿಮೆಯಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದು ಈ ಪ್ರಶಸ್ತಿ ಮೂಲಕ ಮತ್ತಷ್ಟು ಜವಬ್ದಾರಿ ಹೆಚ್ಚಿದೆ. ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜ ಸೇವಕರಾಗಿ, ದಾನಿಯಾಗಿ ಗುರುತಿಸಿಕೊಂಡಿರುವ ಕೃಷ್ಣಮೂರ್ತಿ ಮಂಜ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಗ್ರಾಮಸ್ಥರ ಪರವಾಗಿ ಚಿತ್ತೂರಿನಲ್ಲಿ ನವೆಂಬರ್ 5 ಶನಿವಾರ ಸಂಜೆ ಹುಟ್ಟೂರ ಸನ್ಮಾನ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಹಾಗೂ ವಂಡಬಳ್ಳಿ ಜಯರಾಮ ಶೆಟ್ಟಿ ಹೇಳಿದ್ದಾರೆ.

Comments are closed.