(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬುಧವಾರ ಸಂಜೆ ಬಳಿಕ ಸುರಿದ ಏಕಾಏಕಿ ಮಳೆಯಿಂದಾಗಿ ಕೋಟೇಶ್ವರ ಅಂಡರ್ ಪಾಸ್ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಮೋಡ ಕವಿದ ವಾತಾವರಣದ ಜೊತೆ ಸಂಜೆ 6 ಗಂಟೆ ಬಳಿ ಮಳೆಯಾಗಿದ್ದು ಮಳೆಯಿಂದ ರಕ್ಷಣೆಗಾಗಿ ದ್ವಿಚಕ್ರ ವಾಹನ ಸವಾರರು ಅಂಡರ್ ಪಾಸ್ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಿದ್ದರಿಂದ ಬಸ್, ಲಾರಿ, ಕಾರು, ರಿಕ್ಷಾ ಸಹಿತ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅರ್ಧ ಗಂಟೆಗೂ ಅಧಿಕ ಕಾಲ ಸಮಸ್ಯೆಯಾಗಿತ್ತು.
ಕೋಟೇಶ್ವರ ಒಳಪೇಟೆ ರಸ್ತೆ, ಕೋಟೇಶ್ವರ- ಹಾಲಾಡಿ ರಸ್ತೆ ಸಹಿತ ಎರಡೂ ಕಡೆಯ ಸರ್ವೀಸ್ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದ ದೃಶ್ಯಕಂಡುಬಂತು.
Comments are closed.