UAE

ಕರ್ನಾಟಕ ಸಂಘ ಶಾರ್ಜಾದ ‘ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿರುವ ರಿಷಬ್ ಶೆಟ್ಟಿ

Pinterest LinkedIn Tumblr

ಯುಎಇ: ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಶಾರ್ಜಾ ಕರ್ನಾಟಕ ಸಂಘದ 20ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ 13 ನೇ ನವೆಂಬರ್ ಭಾನುವಾರ 2022, ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ, ವಿನ್ನರ್ಸ್ ಸ್ಪೋರ್ಟ್ಸ್ ಕ್ಲಬ್, ಅಜ್ಮಾನ್ ನಲ್ಲಿ ನಡೆಯಲಿದೆ. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ವಿಶ್ವ ಮೆಚ್ಚಿರುವ “ಕಾಂತಾರ” ಬಹುಭಾಷಾ ಚಿತ್ರದ ಕನ್ನಡಿಗ ನಾಯಕ ನಟ ಮತ್ತು ನಿರ್ದೇಶಕರು ಶೆಟ್ಟಿಯವರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

22ನೇ ಸಾಲಿನ “ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ” ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ರವರ ಮಡಿಲಿಗೆ
ಯು.ಎ.ಇ. ಯಲ್ಲಿ ಪ್ರಖ್ಯಾತ ಉದ್ಯಮಿ, ಸಮಾಜ ಸೇವಕರಾಗಿ, ಕರ್ನಾಟಕ ಭಾಷೆ, ಕಲೆ ಸಂಸ್ಕೃತಿಯ ವೈಭವಕ್ಕೆ ಸದಾ ನೆರವು ನೀಡುವ ಪೋಷಕರಾಗಿರುವ ಮೊಸಾಕೊ ಶಿಪ್ಪಿಂಗ್ ಅಂಡ್ ಫಾರ್ವರ್ಡಿಂಗ್- ದುಬಾಯಿ ವ್ಯವಸ್ಥಾಪಕ ನಿರ್ದೇಶಕರಾದ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ರವರ ಸಾಧನೆಗೆ ಶಾರ್ಜಾ ಕರ್ನಾಟಕ ಸಂಘ ನೀಡುತಿರುವ ಪ್ರತಿಷ್ಠಿತ “ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ”ಯನ್ನು ಪ್ರದಾನಿಸಲಾಗುವುದು.

ದ್ವಿದಶಮಾನೋತ್ಸವದ ಈ ಸಂದರ್ಭದಲ್ಲಿ ಕನ್ನಡ ಭಾಷೆ ಕಲೆ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿರುವ ನವೀದ್ ಮಾಗುಂಡಿ, ಮಲ್ಲಿಕಾರ್ಜುನ ಗೌಡ ಹಾಗೂ ರಾಜೇಶ್ ಸಿಕ್ವೇರಾ ಇವರುಗಳಿಗೆ ವಿಶೇಷ ಗೌರವ ಸನ್ಮಾನ ಸ್ವೀಕರಿಸಲಿದ್ದಾರೆ. ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಲಿದೆ.

ಚಿಣ್ಣರ ಚಿಲಿಪಿಲಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ
ನವೆಂಬರ್ 14 ಮಕ್ಕಳ ದಿನಾಚರಣೆಯ ಅಂಗವಾಗಿ 13ನೇ ತಾರೀಕಿನಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಬಾರಿ ಕರ್ನಾಟಕ ಸಂಘ ಶಾರ್ಜಾ ಯು.ಎ.ಇ. ಮಟ್ಟದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಎರ್ಪಡಿಸಲಾಗಿದ್ದು ವಿಶೇಷ ಕಾರ್ಯಕ್ರಮ ಸರ್ವರ ಗಮನ ಸೆಳೆಯಲಿದೆ.

ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಆಗಮಿಸಿ ಕನ್ನಡ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಪರವಾಗಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ ಇ. ಮೂಳೂರ್ ಅವರು ಮಾಧ್ಯಮದ ಮೂಲಕ ಆಹ್ವಾನಿಸಿದ್ದಾರೆ.

Comments are closed.