ಕರಾವಳಿ

ಆಟೋದಲ್ಲಿ ಬಿಟ್ಟುಹೋದ 12 ಲಕ್ಷ ಮೌಲ್ಯದ ಚಿನ್ನವನ್ನು ಮಹಿಳೆಗೆ ಮರಳಿಸಿದ ರಿಕ್ಷಾ ಚಾಲಕ

Pinterest LinkedIn Tumblr

ಕುಂದಾಪುರ: ಬಳ್ಕೂರು ಕಾರೇಕುದ್ರುವಿನ ರಿಕ್ಷಾ ಚಾಲಕ ಪ್ರಕಾಶ್‌ ನಾಯಕ್‌ ಅವರು ಮಹಿಳೆಯೊಬ್ಬರು ತನ್ನ ರಿಕ್ಷಾದಲ್ಲಿ ಬಿಟ್ಟುಹೋಗಿದ್ದ ಸುಮಾರು 12 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಲಲಿತಾ ಎನ್ನುವರು ಸೋಮವಾರ ಕುಂದಾಪುರ ಪೇಟೆಯಿಂದ ತನ್ನ ಮನೆಯಿರುವ ಒಂಭತ್ತು ದಂಡಿಗೆಗೆ ರಿಕ್ಷಾದಲ್ಲಿ ತೆರಳಿದ್ದರು. ಮರಳಿ ಬಂದ ಚಾಲಕ ರಿಕ್ಷಾಕ್ಕೆ ಗ್ಯಾಸ್‌ ಹಾಕಲು ಹೋದಾಗ ಸೀಟಿನ ಕೆಳಗೆ‌ ಚಿನ್ನಾಭರಣ ಬಿದ್ದಿರುವುದನ್ನು ನೋಡಿ ಕುಂದಾಪುರ ಪೊಲೀಸ್‌ ಠಾಣೆಗೆ ಅದನ್ನು ಒಪ್ಪಿಸಿದರು.

ಲಲಿತಾ ಅವರಿಗೆ ಚಿನ್ನ ಕಳೆದುಹೋಗಿರುವ ವಿಚಾರ ಗಮನಕ್ಕೆ ಬಂದಿದ್ದು, ದೂರು ಸಲ್ಲಿಸಲೆಂದು ಸಹೋದರನೊಂದಿಗೆ ಪೊಲೀಸ್‌ ಠಾಣೆಗೆ ಬಂದರು. ಪೊಲೀಸ್‌ ಉಪನಿರೀಕ್ಷಕ ಸದಾಶಿವ ಗವರೋಜಿ ಅವರು ರಿಕ್ಷಾ ಚಾಲಕನನ್ನು ಬರಹೇಳಿ ಅವರ ಉಪಸ್ಥಿತಿಯಲ್ಲಿ ಚಿನ್ನಾಭರಣವನ್ನು ಮಹಿಳೆಗೆ ಒಪ್ಪಿಸಿದರು.

ಆಟೋ ಚಾಲಕ ಪ್ರಕಾಶ್‌ ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Comments are closed.