ಕರ್ನಾಟಕ

ಅಪರಾಧ ಪ್ರಕರಣ ಪತ್ತೆ ಮಾಡ್ತಿದ್ದ ‘ಪೂಜಾ’ಗೆ ದಾವಣಗೆರೆ ಪೊಲೀಸರಿಂದ ಭಾವಪೂರ್ಣ ವಿದಾಯ

Pinterest LinkedIn Tumblr

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿನ ಅಪರಾಧ ವಿಭಾಗದ ‘ಪೂಜಾ’ ಶ್ವಾನವು ಮಂಗಳವಾರ ಅಕಾಲಿಕ ಮರಣ ಹೊಂದಿದೆ.

‘ಪೂಜಾ’ ಹೆಸರಿನ ಶ್ವಾನವು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಹಲವು ಅಪರಾಧ ಪ್ರಕರಣಗಳ ಪತ್ತೆಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಮೃತ ಪೂಜಾಗೆ ಭಾವಪೂರ್ಣಶ್ರದ್ಧಾಂಜಲಿ ಅರ್ಪಿಸಲಾಗಿದೆ.

ದಾವಣಗೆರೆ ಡಿಎಆರ್ ಆವರಣದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪುಷ್ಪ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

Comments are closed.