(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಪೇಟೆಯಲ್ಲಿ ಕಳೆದ 6 ತಿಂಗಳಿನಿಂದ ಗೂಳಿಯೊಂದರ (ಬಸವ) ಕಾಲಿಗೆ ಸರಿಗೆ ಚುಚ್ಚಿ ವೇದನೆ ಪಡುತ್ತಿತ್ತು. ಅದನ್ನು ತೆಗೆಯಲು ಹೋದಾಗ ಕೈಗೆ ಸಿಗದ ಗೂಳಿಯನ್ನು ಹಿಡಿದ ಈ ತಂಡ ಮಾನವೀಯ ಕಾರ್ಯ ಮಾಡಿದೆ.
ಸರಿಗೆ ಚುಚ್ಚಿ ಉಪ್ಪುಂದ ಪೇಟೆಯಲ್ಲಿ ಓಡಾಡುತ್ತಿದ್ದ ಗೂಳಿ ಹಿಡಿದು ಚಿಕಿತ್ಸೆ ನೀಡಲು ಭಜರಂಗ ದಳ ಕಳೆದ ಆರು ತಿಂಗಳಿನಿಂದ ಹರಸಾಹಸ ಪಟ್ಟಿತ್ತು. ಆದರೆ ಯಾರ ಕೈಗೂ ಸಿಗದ ಗೂಳಿ ಕಾಲಿನ ನೋವಿನ ನಡುವೆಯೂ ಓಟಕೀಳುತ್ತಿತ್ತು. ಶತಾಯಗತಾಯ ಗೂಳಿ ವೇದನೆಗೆ ಮುಕ್ತಿ ನೀಡಲು ಪಣತೊಟ್ಟ ಬೈಂದೂರು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಪ್ರಖಂಡದ ಸಂಯೋಜಕರಾದ ಸುಧಾಕರ್ ಶೆಟ್ಟಿ ನೇತೃತ್ವದ ತಂಡ ಸತತ 3 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕಾಲಿಗೆ ಸರಿಗೆ ಇಂದ ಚುಚ್ಚಿಸಿಕೊಂಡು ನರಳಾಟ ನಡೆಸುತ್ತಿರುವ (ಗೂಳಿ) ಬಸವನನ್ನು ಹಿಡಿದು ಸರಿಗೆಯನ್ನು ತೆಗೆದು ಚಿಕಿತ್ಸೆ ಕೊಡಿಸಿದ್ದಾರೆ.
ಸುಧಾಕರ್ ಶೆಟ್ಟಿ, ಗೌರೀಶ್ ಹುದಾರ್, ಗುರು ಕಾರ್ತಿಕ್ ಶೆಟ್ಟಿ, ನಾಗರಾಜ್ ಗಾಣಿಗ ಸಹಿತ 13 ಮಂದಿಯ ತಂಡ ತಡರಾತ್ರಿ ವೇಳೆ ಗೂಳಿಯನ್ನು ಅರಸಿ ಹಿಡಿದು ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Comments are closed.