ಕುಂದಾಪುರ: ಮೀನುಗಾರಿಕೆ ನಡೆಸಿ ಬಂದರಿಗೆ ಬಂದ ಬೋಟಿನಿಂದ ಮೀನು ಖಾಲಿಮಾಡುವಾಗ ನದಿಗೆ ಬಿದ್ದು ಕಾಣೆಯಾದ ಮೀನುಗಾರನ ಶವ ಪತ್ತೆಯಾಗಿದೆ.
ಒರಿಸ್ಸಾ ಮೂಲದ ಮೀನುಗಾರ ಪ್ರಮೋದ ಮಿನ್ಜ್ (32) ಮೃತ ಮೀನುಗಾರ. ಗಂಗೊಳ್ಳಿ ಮೂಲದ ಪ್ರಭಾಕರ ಖಾರ್ವಿ ಎನ್ನುವರ “ಶ್ರೀ ಯಕ್ಷೇಶ್ವರಿ” ಎಂಬ ಬೋಟ್‌ನಲ್ಲಿ ಇವರ ಕಾರ್ಮಿಕರಾಗಿದ್ದರು.
ಘಟನೆ ವಿವರ: ಆಳ ಸಮುದ್ರದ ಮೀನುಗಾರಿಕೆ ಮಾಡಿ ವಾಪಾಸ್ಸು ನ.30ರಂದು ಗಂಗೊಳ್ಳಿ ಬಂದರು ಬಳಿ ಪಂಚಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ ರಾತ್ರಿ 9.30ಕ್ಕೆ ಬೋಟಿನಿಂದ ಪ್ರಮೋದ ಮಿನ್ಜ, ಆನಂದ ತರಕ್ಕಿ , ಪ್ರಮೋದ ತೋಪು ಹಾಗೂ ಇತರರು ಸೇರಿ ಮೀನನ್ನು ಖಾಲಿ ಮಾಡುತ್ತಿರುವಾಗ ಪ್ರಮೋದ ಮಿನ್ಜ್ ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ಪಂಚಗಂಗಾವಳಿ ನದಿಯ ನೀರಿಗೆ ಬಿದ್ದು ಕಾಣೆಯಾಗಿದ್ದರು. ಸತತ ಹುಡುಕಾಟದ ಬಳಿಕ ಡಿ.2 ರಂದು ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.