ಕರ್ನಾಟಕ

ಮೋದಿಯವರ ಮಾನವೀಯ ಕಾರ್ಯಗಳನ್ನು ಜನರಿಗೆ ತಲುಪಿಸಿ: ಸಂಸದ ಬಿ. ವೈ ರಾಘವೇಂದ್ರ

Pinterest LinkedIn Tumblr

ಶಿವಮೊಗ್ಗ: ಕೇಂದ್ರ ಸರ್ಕಾರ ಆಡಳಿತ ಅವಧಿಯಲ್ಲಿ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರು ಬಡವರಿಗೆ ಹಾಗೂ ಶ್ರೀ ಸಾಮಾನ್ಯನ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಶಿವಮೊಗ್ಗ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿ ಮಾತನಾಡಿದರು.

ಕಡಿಮೆ ದರದಲ್ಲಿ ವೈದ್ಯಕೀಯ ಸೌಲಭ್ಯ ಸಿಗಲು ಅಯುಷ್ಮಾನ್ ಭಾರತ ಯೋಜನೆ, ಔಷಧಿಗಳಿಗಾಗಿ ಜನರಿಕ್ ಮೆಡಿಸಿನ್ ಮಳಿಗೆಗಳು, ಬಿಪಿಎಲ್ ಕುಟುಂಬಗಳಿಗೆ ಇನ್ನು ಒಂದು ವರ್ಷ ಆಹಾರ ಧಾನ್ಯವನ್ನು ಒದಗಿಸಲು ಪ್ರಧಾನಮಂತ್ರಿ ಅನ್ನ ಯೋಜನೆಯ ವಿಸ್ತರಣೆ, ರೈತರ ಕಲ್ಯಾಣಕ್ಕಾಗಿ ಕಿಸಾನ್ ಸಮ್ಮಾನ್ ನಿಧಿ, ಕೋವಿಡ್ ಮಹಾ ಮಾರಿಯ ಸಮಯದಲ್ಲಿ ನಮ್ಮ ದೇಶದಲ್ಲೇ ಔಷಧವನ್ನು ತಯಾರಿಸಿ ಪ್ರಾಣವನ್ನು ರಕ್ಷಿಸಿದ್ದಾರೆ. ಈ ರೀತಿಯ ಕಠಿಣ ಸಂದರ್ಭವನ್ನು ಎದುರಿಸಲು ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್ ಪ್ಲಾಂಟ್, ದೇಶದ ರಕ್ಷಣೆ, ಸೈನಿಕರಿಗೆ ಬೇಕಾದ ಆಧುನಿಕ ಶಾಸ್ತ್ರಗಳು, ಯುದ್ಧ ಸಲಕರಣೆಗಳು ಹೀಗೆ ಹಲವು ಜನಪರ ಮಾನವೀಯ ಕಾರ್ಯಗಳನ್ನು ಪ್ರಧಾನಿಯವರು ನೀಡಿದ್ದಾರೆ ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಜನರಿಗೆ ತಲುಪಿಸಿ ಎಂದು ಅವರು ಕರೆ ನೀಡಿದರು.

ಸಭೆಯಲ್ಲಿ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್ ಅವರು ಜಿಲ್ಲಾ ಪ್ರಭಾರಿಯಾದ ಮೋನಪ್ಪ ಬಂಡಾರಿ,ಸಹ ಪ್ರಭಾರಿ ಆರ್ ಡಿ ಹೆಗಡೆ ಅವರು ಎನ್ ಎಸ್ ಹೆಗಡೆ, ಶಾಸಕರಾದ ಕುಮಾರ್ ಬಂಗಾರಪ್ಪ ನವರು, ಅಶೋಕ್ ನಾಯ್ಕ್ ಅವರು. ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಅರುಣ್ ಡಿ. ಎಸ್ ಹಾಗೂ ವಿವಿಧ ನಿಗಮ ಮಂಡಳಿಯ ಸದಸ್ಯರು,ಪಕ್ಷದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

 

Comments are closed.