ಉಡುಪಿ: ಏಸು ಕ್ರಿಸ್ತರ ಜನ್ಮದಿನ ನಿಮಿತ್ತ ಭಾನುವಾರ ನಡೆಯುವ ಕ್ರಿಸ್‌ಮಸ್ ಹಬ್ಬಕ್ಕೆ ಉಡುಪಿ ಜಿಲ್ಲೆಯಾಧ್ಯಂತ ಸಂಭ್ರಮದ ತಯಾರಿ ನಡೆದಿದೆ.
ಉಡುಪಿ ನಗರ, ಶಿರ್ವ ಮಂಚಕಲ್, ಬ್ರಹ್ಮಾವರ, ಕಲ್ಯಾಣಪುರ ಸಂತೆಕಟ್ಟೆ, ಕಾರ್ಕಳ, ಕುಂದಾಪುರ ಮತ್ತಿತರ ಕ್ರಿಶ್ಚಿಯನ್ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಮನೆ ಮನೆಗಳಲ್ಲಿ ಗೋದಲಿಗಳನ್ನು ನಿರ್ಮಿಸಿ ಕ್ರಿಸ್ತ ಜಯಂತಿಗೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಈ ಭಾಗದ ಚರ್ಚ್‌ಗಳಿಗೆ ವಿಶೇಷ ದೀಪಾಲಂಕಾರ ಮಾಡಿ ಹಬ್ಬದ ವಿಶೇಷ ಪ್ರಾರ್ಥನೆಗೆ ತಯಾರಿ ನಡೆಸಲಾಗಿದೆ.
ಉಡುಪಿ ನಗರದಲ್ಲಿ ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕ್ರಿಸ್ಮಸ್ ಹಬ್ಬಕ್ಕೆ ಒಂದು ದಿನ ಇರುವಾಗಲೇ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಅಲಂಕಾರಿಕ ವಸ್ತುಗಳು,ಉಡುಗೊರೆಗಳ, ಸಿಹಿತಿನಿಸುಗಳ ಖರೀದಿ ಜೋರಾಗಿದೆ.
ಬೇಕರಿಗಳಲ್ಲಿ ವಿಶೇಷ ಕೇಕ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಹಬ್ಬಕ್ಕಾಗಿ ವೈವಿಧ್ಯಮಯ ಚಾಕೊಲೇಟ್‌ಗಳು ಮಳಿಗಳಲ್ಲಿ ಹೆಚ್ಚು ಮಾರಾಟ ಆಗುತ್ತಿವೆ. ಕ್ರಿಸ್ಮಸ್ ನ ಬಹುಮುಖ್ಯ ತಿನಿಸು ಕುಸ್ವಾರ್. ಬೇಕರಿಗಳಲ್ಲಿ ಕುಸ್ವಾರ್ ಗೆ ಬೇಡಿಕೆ ಹೆಚ್ಚಿದ್ದು ತರಹೇವಾರಿ ಪ್ಯಾಕೇಟ್ ಗಳಲ್ಲಿ ಲಭ್ಯವಿದ್ದು ಕ್ರೈಸ್ತ ಬಾಂಧವರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
Comments are closed.