ಕರ್ನಾಟಕ

ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ: ವಯಸ್ಸಾದ ವ್ಯಕ್ತಿಯನ್ನು ರೋಡಲ್ಲಿ 1 ಕಿ.ಮೀ ಎಳೆದೊಯ್ದ ಕಿರಾತಕ ಯುವಕ..!

Pinterest LinkedIn Tumblr

ಬೆಂಗಳೂರು: ಬೈಕ್‌ ಸವಾರನೊಬ್ಬ ಸುಮಾರು 1 ಕಿ.ಮೀ ದೂರದಷ್ಟು ವಯಸ್ಸಾದ ವ್ಯಕ್ತಿಯನ್ನು ಸ್ಕೂಟಿಯಲ್ಲಿ ದರದರನೇ ಎಳೆದೊಯ್ದು ಅಮಾನವೀಯ ಕೃತ್ಯವೆಸಗಿದ ಘಟನೆ ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಾಗರಿಕರು ಯುವಕನ ಕೃತ್ಯವನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.

ರಾಂಗ್‌ ರೂಟ್‌ನಲ್ಲಿ ಬಂದಿದ್ದ ಬೈಕ್‌ ಸವಾರ, ಟಾಟಾ ಸುಮೋಗೆ ಹಿಂದೆನಿಂದ ಡಿಕ್ಕಿ ಹೊಡೆದಿದ್ದಾನೆ. ಟಾಟಾ ಸುಮೋಗೆ ಯಾಕೆ ಗುದ್ದಿದ್ದೀಯ ಎಂದು ಚಾಲಕ ಕೇಳಿದ್ದು ಈ ವೇಳೆ ಟಾಟಾ ಸುಮೋ ಚಾಲಕ ವ್ಯಕ್ತಿ ಹಾಗೂ ಬೈಕ್‌ ಸವಾರನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ತದನಂತರ ಆತ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಟಿದ್ದಾನೆ. ಈ ವೇಳೆ ಟಾಟಾ ಸುಮೋ ಚಾಲಕ ಆ ಸ್ಕೂಟರ್ ಹಿಡಿದುಕೊಂಡಿದ್ದು ವಯಸ್ಸಾದ ವ್ಯಕ್ತಿಯನ್ನ ನಡು ರಸ್ತೆಯಲ್ಲಿ ಎಳೆದೊಯ್ದಿದ್ದಾನೆ.

ಕೊನೆಗೂ ಸಾರ್ವಜನಿಕರು ಬೈಕ್‌ ಸವಾರನನ್ನು ತಡೆದು. ಹಿಗ್ಗಾಮುಗ್ಗ ಥಳಿಸಿದ್ದಾರೆ. ಕಿಲೋಮೀಟರ್ ದೂರ ರಸ್ತೆಯಲ್ಲಿ ಎಳೆದೊಯ್ದ ಕಾರಣ ಸುಮೋ ಚಾಲಕನ ಕೈ-ಕಾಲು ಸಂಪೂರ್ಣ ತರಚಿದೆ.

ಈ ಬಗ್ಗೆ ಸುಮೋ ಚಾಲಕ ಮುತ್ತಪ್ಪ ಮಾತನಾಡಿ, ನನ್ನ ವಾಹನಕ್ಕೆ ಹಿಂದೆಯಿಂದ ಬಂದು ಆತ ಗುದ್ದಿದ್ದು ಯಾಕೆ ಎಂದು ಕೇಳಿದೆ. ಅವನು ಏನೂ ಮಾತನಾಡದೇ ಪರಾರಿಯಾಗಲು ಯತ್ನಿಸಿದ, ಆಗ ನಾನು ಆತನ ಬೈಕ್‌ ಅನ್ನು ಹಿಡಿದುಕೊಂಡು ಹೋದೆ. ಸುಮಾರು 1 ಕಿ.ಮೀ ನನ್ನ ಬೈಕ್‌ನಲ್ಲಿ ಎಳೆದುಕೊಂಡು ಹೋದ. ಬಳಿಕ ಜನರು ಅಡ್ಡ ಹಾಕಿ ಬೈಕ್‌ ಸವಾರನನ್ನು ತಡೆದರು. ನನ್ನ ಸೊಂಟ, ಕಾಲು, ಕೈಗೆ ಗಾಯಗಳು ಆಗಿದೆ ಎಂದಿದ್ದಾರೆ.

Comments are closed.