ಕರಾವಳಿ

ಬಿಜೆಪಿ ಸಾಮಾಜಿಕ ಜಾಲತಾಣ ರಾಜ್ಯ ಸಮಿತಿ ಸದಸ್ಯರಾಗಿ ಮಹೇಶ್ ಪೂಜಾರಿ ಕುಂದಾಪುರ‌ ನಿಯುಕ್ತಿ

Pinterest LinkedIn Tumblr

ಬೆಂಗಳೂರು/ಕುಂದಾಪುರ: ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ರಾಜ್ಯ ಸಮಿತಿ ಸದಸ್ಯರಾಗಿ ಮಹೇಶ್ ಪೂಜಾರಿ ಕುಂದಾಪುರ ನಿಯುಕ್ತಿಗೊಂಡಿದ್ದಾರೆ.

ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ರಾಜ್ಯ ಸಹಸಂಚಾಲಕರು ಹಾಗೂ ರಾಜ್ಯ ಸಮಿತಿ ಸದಸ್ಯರನ್ನು ನಿಯುಕ್ತಿಗೊಳಿಸಿ ಜ.24 ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶಿಸಿದ್ದಾರೆ.

ಸಾಮಾಜಿಕ ಜಾಲತಾಣದ ರಾಜ್ಯ ಸಹಸಂಚಾಲಕರಾಗಿ ನರೇಂದ್ರ ಮೂರ್ತಿ ಹಾಗೂ ಸಮಿತಿ ಸದಸ್ಯರಾಗಿ ಪ್ರಶಾಂತ್ ಜಾಧವ್, ರಾಘವೇಂದ್ರ ನಾಗೂರ್, ಆನಂದ ಚೌಹಾಣ್, ಮಹೇಶ್ ಪೂಜಾರಿ ಕುಂದಾಪುರ, ಜೆ. ಕೃಷ್ಣಾ, ಶಂಕರ್, ಕಲಾನಾಥ್ ನಿವಣೆ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಉಡುಪಿ ಜಿಲ್ಲೆ ಕುಂದಾಪುರ ಮೂಲದ ಮಹೇಶ್ ಪೂಜಾರಿಯವರು ಸಿವಿಲ್ ಇಂಜಿನಿಯರ್ ಪದವೀಧರ. ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದು 2016ರಲ್ಲಿ ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಅದಕ್ಕೂ ಮೊದಲು ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.

Comments are closed.