ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದಲ್ಲಿ ಹಾಡಹಗಲೇ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ನಾಲ್ವರನ್ನು ಕೊಲೆಗೈದಿದ್ದು ಆ ಪ್ರದೇಶದಲ್ಲಿ ಈಗ ರಕ್ತ ಸಿಕ್ತ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಹಾಡವಳ್ಳಿ ಗ್ರಾಮದ ಶಂಭು ಹೆಗಡೆ (68) ಅವರ ಪತ್ನಿ ಮಾದೇವಿ ಹೆಗಡೆ (54) ಮಗ ರಾಜೀವ್ ಹೆಗಡೆ (34) ಕುಸುಮಾ ಹೆಗಡೆ (30) ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ಆಸ್ತಿ ವಿಚಾರಕ್ಕೆ ಈ ಭೀಕರ ಕೊಲೆಗಳು ನಡೆಸಿದ ಬಗ್ಗೆ ಅನುಮಾನ ಭಟ್ಕಳ ಪೊಲೀಸರಿಗೆ ಬಂದಿದೆ. ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ನೀಡಿರೋ ಮಾಹಿತಿ ಪ್ರಕಾರ, ಕುಟುಂಬದ ಸಂಬಂಧಿ ವಿನಯ್ ಶ್ರೀಧರ್ ಭಟ್ ಕತ್ತಿಯಿಂದ ಹಲ್ಲೆ ಮಾಡಿ ಈ ಕೃತ್ಯ ಎಸಗಿದ್ದಾನೆ ಎಂದು ಅನುಮಾನಿಸಲಾಗಿದೆ.
ಕಳೆದ ಏಳು ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ್ ಭಟ್ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದರು. ಶ್ರೀಧರ್ ಭಟ್ ಮರಣದ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿಕೊಂಡಿದ್ದರು. ಮಾತುಕತೆ ನಂತರ ಕೊಲೆಯಾದ ಶಂಭು ಭಟ್ಟರು ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಇದೇ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾಳ ಸಹೋದರ ಹಲ್ಯಾಣಿ ನಿವಾಸಿ ವಿನಯ್ ಶ್ರೀಧರ್ ಭಟ್ ಶುಕ್ರವಾರ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆ ನಡೆಸಿದ ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇಡೀ ಕುಟುಂಬವನ್ನೇ ನಿರ್ನಾಮ ಮಾಡಲು ಬಂದಿದ್ದ ಆಗಂತುಕನ ಕೈಯಿಂದ ಎರಡು ಪುಟ್ಟ ಕಂದಮ್ಮಗಳು ಬಚಾವ್ ಆಗಿದೆ.
Comments are closed.