International

ಆರ್.ಆರ್.ಆರ್ ಸಿನಿಮಾದ ‘ನಾಟು..ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ | ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಮನ್ನಣೆ

Pinterest LinkedIn Tumblr

ನವದೆಹಲಿ: ಎಸ್.ಎಸ್ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ‘ನಾಟು ನಾಟು’ ಹಾಡು ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಪಡೆದುಕೊಂಡಿದೆ.

ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದೆ.

ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ‘ನಾಟು ನಾಟು..’ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

‘ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್​ ಹಾಡುಗಳು ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ.

Comments are closed.