ಕುಂದಾಪುರ: ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ ಜೀರ್ಣೋದ್ಧಾರ ಕಾರ್ಯವು ಸ್ಧಳೀಯರ ಸಹಕಾರದಲ್ಲಿ ನಡೆಯುತ್ತಿದ್ದು, ಪಾರ್ಕ್ ಅಭಿವೃದ್ಧಿ ಕಾರ್ಯದ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಮೆಂಡನ್ ನೇತೃತ್ವದಲ್ಲಿ ಜಾಗ ಸಮತಟ್ಟು ಮಾಡುವ ಸಂದರ್ಭ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ. ಈ ಕಲ್ಲಿನ ಬಗ್ಗೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಇವರ ಗಮನಕ್ಕೆ ತಂದಿದ್ದರು.
ಕಲ್ಲಿನಲ್ಲಿ ಸೂರ್ಯ, ಚಂದ್ರ, ಶಿವಲಿಂಗ, ನಂದಿ ವಿಗ್ರಹ ಇರುವುದು ಕಂಡು ಬಂದಿದೆ. ಕೆಳದಿಯ ನಾನೂರು ವರ್ಷದ ಹಳೆಯ ಲಿಂಗ ಮುದ್ರಿಕೆ ಕಲ್ಲು ಇದಾಗಿದೆ. ಈ ಕಲ್ಲು ಸೂರ್ಯ, ಚಂದ್ರ ಇರುವ ತನಕ ಅಜರಾಮರವಾಗಿ ಇರಲಿಯೆನ್ನುವಂತ ಸಂದೇಶ ನೀಡುವಂತಿದೆ.
ಶೈವರು ಶಿವನನ್ನು, ವೈಷ್ಣವರು ವಿಷ್ಣುವನ್ನು, ಜೈನರು ತೀರ್ಥಂಕರರ ನ್ನು ಆರಾಧಿಸುವುದು ಸಾಮಾನ್ಯವಾಗಿತ್ತು. ಶೈವರ ಗಡಿಗಳನ್ನು ಲಿಂಗ ಮುದ್ರೆ ಕಲ್ಲನ್ನು ವೈಷ್ಣವರು ವಾಮನ ಮುದ್ರೆ ಕಲ್ಲನ್ನು ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕುತ್ತಿದ್ದರು. ಆ ಮೂಲಕ ಅವರ ಗಡಿಗಳನ್ನು ಗುರುತು ಮಾಡುವುದು ಸಹಜವಾಗಿತ್ತು.ಅಂತೆಯೇ ಲಿಂಗ ಮುದ್ರೆ ಕಲ್ಲುಗಳನ್ನು ಗಡಿಗೆ ಸಂಬಂಧಿಸಿದ ಗಡಿಯ ಕಲ್ಲುಗಳನ್ನು ಹಾಕಲಾಗಿತ್ತು.
ಈ ಹಿಂದೆ ಶಾಂತಾವರ ವೀರಾಂಜನೇಯ ಅಣತಿ ದೂರದಲ್ಲಿ ವಾಮನ ಮುದ್ರೆ ಕಲ್ಲು, ರಮಾನಂದ ಶೆಟ್ಟಿಗಾರ ಮನೆ ಬಳಿ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿತ್ತು.
ಇತಿಹಾಸಕ್ಕೆ ಸಂಭಂದಿಸಿದ ಶಾಸನ,ವೀರಗಲ್ಲು, ವಕೈ ಮಾಸ್ತಿ ಕಲ್ಲು ಹಾಗೂ ಲಿಂಗ ಮುದ್ರೆ ಕಲ್ಲು ಉಳಿಸುವಲ್ಲಿ ಸಾರ್ವಜನಿಕರ ಸಹಕಾರ, ಸೇವೆ ಅಗತ್ಯವಾಗಿದೆ. ನಮ್ಮ ನಮ್ಮ ಊರಿನಲ್ಲಿ ಇತಿಹಾಸದ ದಾಖಲೆ ಉಳಿಸಬೇಕಾಗಿದೆ ಎಂದು ಇತಿಹಾಸ ಸಂಶೋಧಕ ಫ್ರೊ.ಟಿ. ಮುರುಗೇಶ್ ಹೇಳಿದ್ದಾರೆ.
ಈ ಲಿಂಗ ಮುದ್ರೆ ಕಲ್ಲು ಪತ್ತೆ ಹಚ್ಚುವಲ್ಲಿ ಪಾರ್ಕ್ ಸಮಿತಿಯ ಕಾರ್ಯದರ್ಶಿಯವರಾದ ನಿತೇಶ್ ಶೆಟ್ಟಿ ಬಸ್ರೂರುಮಧುಸೂಧನ್ ಭಟ್ ಸಹಕರಿಸಿದ್ದಾರೆ.
Comments are closed.