ಕರಾವಳಿ

ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ವತಿಯಿಂದ ಬೃಹತ್ ರಕ್ತದಾನ ಶಿಬಿರ | ವೈದ್ಯರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ರಕ್ತದಾನವು ಶ್ರೇಷ್ಠದಾನ. ರಕ್ತದಾನಕ್ಕೆ ಯಾವುದೇ ಜಾತಿ ಮತ ಪಂಥ ಭೇದ ಭಾವಗಳಿಲ್ಲ. ಒಂದು ಹನಿ ರಕ್ತದಿಂದ ಒಬ್ಬ ವ್ಯಕ್ತಿಯ ಜೀವ ಉಳಿಸಬಹುದು. ನಾಡೋಜ ಡಾ.ಜಿ.ಶಂಕರ್ ಇವರ ನೇತೃತ್ವದಲ್ಲಿ ನಡೆಯುವ ಬೃಹತ್ ರಕ್ತದಾನ ಶಿಬಿರಗಳ ಫಲದಿಂದ ಇಂದು ಉಡುಪಿ ಜಿಲ್ಲೆಗೆ ರಕ್ತದಾನಿಗಳ ಜಿಲ್ಲೆ ಎಂಬ ಹೆಸರನ್ನು ತಂದಿದೆ ಎಂದು ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಹೇಳಿದರು.

ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇದರ ವಾರ್ಷಿಕ ಸಂಭ್ರಮಾಚರಣೆ ಸ್ಪಂದನ-2023 ಕಾರ್ಯಕ್ರಮದ ಪ್ರಯುಕ್ತ ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇವರ ಆಶ್ರಯದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಉಳ್ತೂರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ಭಾನುವಾರ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರುಗಿದ ಬೃಹತ್ ರಕ್ತದಾನ ಶಿಬಿರದಲ್ಲಿ ಸ್ಥಳೀಯ ಪರಿಸರದ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವಕ್ವಾಡಿ ಫ್ರೆಂಡ್ಸ್ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಕಾವ್ರಾಡಿ ಬಾಲಚಂದ್ರ ಶೆಟ್ಟಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸತೀಶ್ ಸಾಲಿಯಾನ್ ಉಪಸ್ಥಿತರಿದ್ದರು.

ಈ ಸಂದರ್ಭ ಸ್ಥಳೀಯ ವೈದ್ಯರಾದ ಡಾ.ವಿದ್ಯಾಧರ ಶೆಟ್ಟಿ, ಡಾ.ಆದರ್ಶ ಹೆಗ್ಡೆ, ಡಾ.ಪ್ರಂಶಾತ್ ಶೆಟ್ಟಿ, ಡಾ.ಕೃಷ್ಣಯ್ಯ ಆಚಾರ್ ಇವರನ್ನು ಸಂಸ್ಥೆಯ ವತಿಯಿಂದ ಗುರುತಿಸಿ ಗೌರವಿಸಲಾಯಿತು.

ಕಾಂತೇಶ್ ವಕ್ವಾಡಿ ಸ್ವಾಗತಿಸಿದರು. ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು. ಕುಮಾರ್ ವಂದಿಸಿದರು.

Comments are closed.