ದುಬೈ: ಕಳೆದ ಇಪ್ಪತ್ತು ವರ್ಷಗಳಿಂದ ಯಕ್ಷಮಿತ್ರರು ದುಬೈ ತಂಡಕ್ಕೆ ಸಂಪೂರ್ಣ ಸಹಕಾರ ನೀಡುತ್ತ ಬಂದಿದ್ದೇನೆ. ಇನ್ನೂ ಮುಂದೆಯೂ ನನ್ನ ಸಂಪೂರ್ಣ ಸಹಕಾರ ಯಕ್ಷಮಿತ್ರರು ತಂಡಕ್ಕೆ ಇದೆ ಎಂದು ಉದ್ಯಮಿ ಕಲಾಪೋಷಕ ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ಹೇಳಿದರು.
ನಗರದ ಊದ್ ಮೇತದ ಬಿರಿಯಾನಿ 2020 ನಲ್ಲಿ ಎಪ್ರಿಲ್18 ರಂದು ನಡೆದ ಯಕ್ಷಮಿತ್ರರು ದುಬೈ ಇದರ 20 ನೇ ವರ್ಷದ ಜೂನ್ 4 ರಂದು ನಡೆಯಲಿರುವ ‘ಯಕ್ಷ ಸಂಭ್ರಮ-2023’ ದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ನನ್ನ ಉದ್ಯಮ ಸಂಸ್ಥೆ ಪ್ರಾರಂಭಗೊಂಡ ಸಮಯದಲ್ಲಿ ಯಕ್ಷಮಿತ್ರರು ತಂಡ ಪ್ರಾರಂಭಗೊಂಡಿದೆ.ಈಗ ಯಕ್ಷಮಿತ್ರರು ತಂಡಕ್ಕೆ 20 ರ ವರ್ಷಕ್ಕೆ ಕಾಲಿರಿಸಿದೆ.ಇಪ್ಪತ್ತು ವರ್ಷಗಳ ಕಾಲ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಂತಹ ಸ್ಥಾಪಕ ಸದಸ್ಯರಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೆನೆ.ಈ ಸಂಸ್ಥೆಗೆ ನನ್ನ ಸಂಪೂರ್ಣ ಸಹಕಾರ ಮುಂಚೆಯೂ ಕೊಟ್ಟಿದ್ದೆನೆ ಇನ್ನೂ ಮುಂದೆಯೂ ನನ್ನ ಸಹಕಾರ ಇದೆ ಹಾಗೂ ಯು.ಎ.ಇ.ಯಲ್ಲಿ ಇರುವ ಯಕ್ಷ ಅಭಿಮಾನಿಗಳು ಈ ತಂಡಕ್ಕೆ ಸಹಕಾರ ನೀಡಬೇಕು ಮತ್ತು ಜೂ.4 ರಂದು ನಡೆಯಲಿರುವ ಯಕ್ಷ ಸಂಭ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದ್ದರು.
ಗಣ್ಯರಿಂದ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಯಕ್ಷಮಿತ್ರರು ದುಬೈಯ ಲಾಂಛನವನ್ನು ಲೋಕಾರ್ಪಣೆಗೊಳಿಸಲಾಯಿತ್ತು.ತದ ನಂತರ ಇಪ್ಪತ್ತನೆಯ ವರ್ಷದ ಲೋಕಾಭಿರಾಮ ಪ್ರಸಂಗದ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆ ಮಾಡಿದ ಗಣ್ಯರಾದ ಹೋಟೆಲ್ ಉದ್ಯಮಿ ವಾಸುದೇವ ಭಟ್ ಪುತ್ತಿಗೆ, ಬಿಲ್ಲವಾಸ್ ದುಬೈಯ ನಿಕಟಪೂರ್ವ ಅಧ್ಯಕ್ಷರಾದ ಸತೀಶ್ ಪೂಜಾರಿ, ಈಗಿನ ಅಧ್ಯಕ್ಷರಾದ ಪ್ರಭಾಕರ ಸುವರ್ಣ,ಉದ್ಯಮಿ ಚಲನಚಿತ್ರ ನಿರ್ಮಾಪಕ ಹರೀಶ್ ಬಂಗೆರ,ಕಲಾ ಪೋಷಕರಾದ ಪದ್ಮರಾಜ ಎಕ್ಕಾರ್, ದಿವಾಕರ ಶೆಟ್ಟಿ, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪರವರು ಜೂನ್ 4 ರಂದು ನಡೆಯಲಿರುವ ಯಕ್ಷಮಿತ್ರರು ದುಬೈಯ 20 ವರ್ಷದ ‘ಯಕ್ಷ ಸಂಭ್ರಮ-2023’ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಹೇಳುತ್ತ ಕಾರ್ಯಕ್ರಮ ಯಶಸ್ವಿಯಾಗಿ ಜರಗಲಿ ಎಂದು ಶುಭ ಹಾರೈಸಿದರು.
ಯಕ್ಷಮಿತ್ರರು ದುಬೈಯ ಇಪ್ಪತ್ತನೆಯ ವರ್ಷದ ‘ಯಕ್ಷ ಸಂಭ್ರಮ-2023’ ಜೂನ್ 4 ರಂದು ಸಂಜೆ 4.30 ಕ್ಕೆ ನಗರದ ಊದು ಮೇತದ ಶೇಖ್ ರಷೀದ್ ಆಡಿಟೋರಿಯಂನ ದಿವಂಗತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ವೇದಿಕೆಯಲ್ಲಿ ದಿ.ಪುರುಷೋತ್ತಮ ಪೂಂಜ ವಿರಚಿತ ‘ಲೋಕಾಭಿರಾಮ’ ಯಕ್ಷಗಾನ ಪ್ರದರ್ಶನ ಜರಗಲಿದೆ.ಈ ಪ್ರಸಂಗದಲ್ಲಿ ಅತಿಥಿ ಕಲಾವಿದರಾಗಿ ಬಾಗವತರಾಗಿ ದಿನೇಶ್ ಅಮ್ಮಣ್ಣಾಯ,ಗಣೇಶ್ ಕುಮಾರ್ ಹೆಬ್ರಿ,ಚೆಂಡೆ ಮದ್ದಲೆಯಲ್ಲಿ ರೋಹಿತ್ ಉಚ್ಚಿಲ್,ಶ್ರೀಧರ್ ವಿಟ್ಲ,ಮುಮ್ಮೆಳ ಕಲಾವಿದರಾಗಿ ರಾದಕೃಷ್ಣ ನಾವಡ ಮದೂರು,ಜಯಪ್ರಕಾಶ್ ಶೆಟ್ಟಿ ಪೆರ್ಮುದೆ,ಮೋಹನ್ ಕುಮಾರ್ ಅಮ್ಮುಂಜೆ,ಚಂದ್ರಶೇಖರ ಧರ್ಮಸ್ಥಳ,ಅರುಣ್ ಕೋಟ್ಯಾನ್,ಅಕ್ಷಯ್ ಭಟ್,ವೇಷಭೂಷಣದಲ್ಲಿ ಜಯಂತ ಪೈವಳಿಕೆ ಇವರೊಂದಿಗೆ ನಮ್ಮ ಯಕ್ಷಮಿತ್ರರು ತಂಡದ ಸರ್ವ ಕಲಾವಿದರು ರಂಗದಲ್ಲಿ ಮೆರೆಯಲಿದ್ದರೆ ಎಂದು ಯಕ್ಷಮಿತ್ರರು ದುಬೈಯ ಗುರುಗಳಾದ ರವೀಂದ್ರ ಉಚ್ಚಿಲರವರು ವಿವರಣೆಯನ್ನು ನೀಡುತ್ತ ‘ಲೋಕಾಭಿರಾಮ’ ಪ್ರಸಂಗದ ಕಿರು ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಯು.ಎ.ಇ.ಯ ಹಲವಾರು ಸಂಘ ಸಂಸ್ಥೆಗಳ ಮುಖಂಡರು,ಯಕ್ಷಮಿತ್ರರು ದುಬೈಯ ಸದಸ್ಯರು ಸದಸ್ಯೆಯರು,ಕಲಾವಿದರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಮಾ.ಮಯೂರ್ ಗಣೇಶ್ ಮತ್ತು ಮಾ.ದೀಯನ್ ಗಣೇಶ್ ಪ್ರಾರ್ಥನೆ ಹಾಡಿದರು. ರಿತೇಶ್ ಅಂಚನ್ ಕುಲಶೇಖರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆಮಾಡಿ ಸ್ವಾಗತಿಸಿ ವಂದಿಸಿದರು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
ಪೋಟೋ: ಅಶೋಕ್ ಬೆಳ್ಮಣ್
Comments are closed.