ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ ನಡೆಯುತ್ತಿದೆ. ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರಿನಲ್ಲಿ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಕೊಂಚ ಬಿರುಸು ಕಂಡುಬರುತ್ತಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಬೈಂದೂರು ಕ್ಷೇತ್ರದ ಮಚ್ಚಟ್ಟು ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ಮೊಳಹಳ್ಳಿಯಲ್ಲಿ ಮತದಾನ ಮಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಕನ್ಯಾನ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಬಿಜೂರಿನಲ್ಲಿ ಮತ ಚಲಾಯಿಸಿದರು.
ಹಿರಿಯ ನಾಗರಿಕರು, ಹೊಸಮತದಾರರ ಉತ್ಸಾಹ..!
ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯ ನಾಗರಿಕರು ಹಾಗೂ ಹೊಸ ಮತದಾರರ ಉತ್ಸಾಹದ ಮತದಾನ ಮಾಡುವುದು ಕಂಡುಬಂತು. ಕಾವ್ರಾಡಿ, ನೆಲ್ಲಿಕಟ್ಟೆ, ಕಂಡ್ಲೂರು ಭಾಗದಲ್ಲಿ ಹಿರಿಯ ನಾಗರಿಕರು ರಿಕ್ಷಾ ಮೂಲಕ ಆಗಮಿಸಿ ಉತ್ಸಾಹದಿಂದ ಮತದಾನದಲ್ಲಿ ಪಾಲ್ಘೊಂಡರು.
ನಕ್ಸಲ್ ಪೀಡಿತ ಪ್ರದೇಶಗಳು ಹಾಗೂ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಶಸ್ತ್ರ ಧಾರಿ ಪೊಲೀಸರು, ಅರೆಸೇನಾ ಪಡೆಯವರು ಭದ್ರತೆ ಒದಗಿಸಿದ್ದರು.
Comments are closed.