ಕರಾವಳಿ

ಹೃದಯಕ್ಕೆ ಹತ್ತಿರವಾದ ಊರಲ್ಲಿ ಹೊಸ ಹೆಜ್ಜೆಯಿಡಲಿರುವ ರಿಷಬ್: ‘ಕೆರಾಡಿ ಸ್ಟುಡಿಯೋಸ್’ ಮೂಲಕ ಚಿತ್ರರಂಗಕ್ಕೆ ಅಳಿಲುಸೇವೆ..!

Pinterest LinkedIn Tumblr

ಬೆಂಗಳೂರು: ‘ಕಾಂತಾರ’ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ. ಸಿನಿಮಾಗಳಿಗೆ ಸಂಬಂಧಿಸಿದ ಪ್ರಚಾರ, ಮಾರ್ಕೆಟಿಂಗ್‌ , ಇವೆಂಟ್‌ ಲಾಂಚ್‌ ಮುಂತಾದ ಕೆಲಸಕ್ಕಾಗಿ ‘ಕೆರಾಡಿ ಸ್ಟುಡಿಯೋಸ್‌’ ನಿರ್ಮಿಸಲಿದ್ದಾರೆ.

ತಮ್ಮ ಊರಾದ ‘ಕೆರಾಡಿʼ ಹೆಸರಿನಲ್ಲಿ ‘ಕೆರಾಡಿ ಸ್ಟುಡಿಯೋಸ್’ ನಿರ್ಮಿಸಿದ ರಿಷಬ್‌ ಈ ಬಗ್ಗೆ ಮಾಹಿತಿಯನ್ನು ನೀಡಿ ಟ್ವೀಟ್‌ ಮಾಡಿದ್ದಾರೆ.

“ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ.. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ, ‘ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ. ಅಂದ ಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ ಎಂದು ರಿಷಬ್‌ ಹೇಳಿದ್ದಾರೆ.

Comments are closed.