ದುಬೈ: ಯಕ್ಷಮಿತ್ರರು ದುಬೈ ಇವರ ಇಪ್ಪತ್ತನೆಯ ವರ್ಷದ ‘ಯಕ್ಷ-ಸಂಭ್ರಮ’ ಕಾರ್ಯಕ್ರಮದ ಅಂಗವಾಗಿ ಲೋಕಾಭಿರಾಮ ಎಂಬ ಯಕ್ಷಗಾನ ಪ್ರದರ್ಶನ ಜೂ.4ರಂದು ದುಬೈನಲ್ಲಿ ಜರುಗಿತು.
ದುಬೈಯ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಊರಿಂದ ಆಗಮಿಸಿದ ಸುಪ್ರಸಿದ್ಧ ಹಿಮ್ಮೆಳ ಹಾಗೂ ಮುಮ್ಮೆಳ ಕಲಾವಿದರ ಹಾಗೂ ಯಕ್ಷಮಿತ್ರರು ದುಬೈಯ ತಂಡದ ಹವ್ಯಾಸಿ ಕಲಾವಿದರ ಅಭಿನಯದಲ್ಲಿ ಲೋಕಾಭಿರಾಮ ಯಕ್ಷಗಾನ ಅದ್ದೂರಿಯಾಗಿ ಪ್ರದರ್ಶನಗೊಂಡಿತು.
ತಂಡದ ಗುರುಗಳಾದ ರವಿಂದ್ರ ಉಚ್ಚಿಲ್ ಮತ್ತು ಕಿಶೋರ್ ಗಟ್ಟಿಯವರ ನಿರ್ದೇಶನದಲ್ಲಿ ನಡೆದ ಪ್ರಸಂಗದಲ್ಲಿ ಊರಿಂದ ಆಗಮಿಸಿದ ಅತಿಥಿ ಕಲಾವಿದರಾಗಿ ಭಾಗವತರಾಗಿ ದಿನೇಶ್ ಅಮ್ಮಣ್ಣಾಯ, ಗಣೇಶ್ ಕುಮಾರ್ ಹೆಬ್ರಿ, ಚೆಂಡೆ ಮದ್ದಲೆಯಲ್ಲಿ ರೋಹಿತ್ ಉಚ್ಚಿಲ್, ಶ್ರೀಧರ್ ವಿಟ್ಲ, ಮುಮ್ಮೆಳ ಕಲಾವಿದರಾಗಿ ರಾದಕೃಷ್ಣ ನಾವಡ ಮದೂರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಮೋಹನ್ ಕುಮಾರ್ ಅಮ್ಮುಂಜೆ, ಚಂದ್ರಶೇಖರ ಧರ್ಮಸ್ಥಳ, ಅರುಣ್ ಕೋಟ್ಯಾನ್, ಅಕ್ಷಯ್ ಭಟ್, ವೇಷಭೂಷಣದಲ್ಲಿ ಜಯಂತ ಪೈವಳಿಕೆ ಭಾಗವಹಿಸಿದರು.
ಸರಳ ರೀತಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಊರಿಂದ ಆಗಮಿಸಿದ ಕಲಾವಿದರಿಗೆ ಮತ್ತು ವಿಶೇಷ ಅಹ್ವಾನಿತರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮೊದಲು ಯಕ್ಷಮಿತ್ರರು ತಂಡದ ಹಿರಿಯ ಸದಸ್ಯರಾದ ದಿ.ವಿಠಲ ಶೆಟ್ಟಿ, ಕಲಾವಿದರಾದ ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜ,ದಿ.ಬಲಿಪ ನಾರಯಣ ಭಾಗವತರು, ದಿ. ಬಲಿಪ ಪ್ರಸಾದ ಭಾಗವತರಿಗೆ ಶ್ರದ್ದಂಜಲಿಯನ್ನು ಸಮರ್ಪಿಸಲಾಯಿತು.
ಕಲಾವಿದರಾದ ರಾದಕೃಷ್ಣ ನಾವಡ, ಗಣೇಶ್ ಕುಮಾರ್ ಹೆಬ್ರಿ, ಮೋಹನ್ ಕುಮಾರ್ ಅಮ್ಮುಂಜೆ, ಅರುಣ್ ಕೋಟ್ಯನ್, ವಿಶೇಷ ಅಹ್ವಾನಿತರಾದ ಯಜ್ಞೇಶ್ವರ ಬರ್ಕೆ, ವಿಠಲ ಕುಲಲ್ ಮಂಗಳೂರು, ಸಂದೇಶ್ ಶೆಟ್ಟಿ ಮಂಗಳೂರವರನ್ನು ಗಣ್ಯರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ದಿವಾಕರ ಶೆಟ್ಟಿ, ವಾಸುದೇವ ಭಟ್ ಪುತ್ತಿಗೆ, ಸರ್ವೋತ್ತಮ ಶೆಟ್ಟಿ, ಹರೀಶ್ ಬಂಗೆರ, ಹರೀಶ್ ಶೇರಿಗಾರ್, ಶ್ಯಾಮ್ ಭಟ್, ಸತೀಶ್ ಪೂಜಾರಿ, ಉದಯ ಶೆಟ್ಟಿ, ಮಾಧವ ಕಾಮತ್ ಮತ್ತು ಯಕ್ಷಮಿತ್ರರು ದುಬೈಯ ಚಿದಾನಂದ ಪೂಜಾರಿ, ಪದ್ಮರಾಜ ಎಕ್ಕಾರ್,ಸತೀಶ್ ಶೆಟ್ಟಿ, ರವಿ ಕೋಟ್ಯನ್, ಜಯಂತ್ ಶೆಟ್ಟಿ ಉಪಸ್ಥಿತರಿದ್ದರು.
ರಿತೇಶ್ ಅಂಚನ್ ಕುಲಶೇಖರ ಮತ್ತು ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.
Comments are closed.