ಕುಂದಾಪುರ: ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿದ್ದಂತೆಯೇ ಕುಂದಾಪುರ ನಗರ ಸಹಿತ ತಾಲೂಕಿನ ವಿವಿದೆಡೆ ಶುಕ್ರವಾರ ಬೆಳಿಗ್ಗೆ 10 ಗಂಟೆ ಬಳಿಕ ಬಾರೀ ಮಳೆಯಾಗಿದೆ.
ಬೆಳಿಗ್ಗೆ ನಿಂದ ಬಿಸಿಲಿನ ವಾತಾವರಣವಿದ್ದು 9.30 ರ ನಂತರ ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು ಆರಂಭವಾಗಿದ್ದು 10 ಗಂಟೆ ವೇಳೆಗೆ ಸಿಡಿಲು-ಮಿಂಚು ಸಹಿತ ಮಳೆ ಸುರಿದಿದೆ. ಹಗಲು ಹೊತ್ತಿನಲ್ಲಿ ಕುಂದಾಪುರ ಭಾಗದಲ್ಲಿ ಸುರಿದ ಮೊದಲ ಮಳೆ ಇದಾಗಿದ್ದು ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ.
ಒಮ್ಮೆಲೆ ಸುರಿದ ಮಳೆಯಿಂದಾಗಿ ವಿದ್ಯಾರ್ಥಿಗಳು, ಕಚೇರಿಗೆ ತೆರಳುವವರಿಗೆ ಕೊಂಚ ಸಮಸ್ಯೆಯಾಗಿತ್ತು. ಒಂದಷ್ಟು ಜನರು ರಿಕ್ಷಾ, ಬಸ್ಸುಗಳ ಮೊರೆ ಹೋದರು. ಮಳೆಗಾಲಕ್ಕೆ ತಯಾರಾಗದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿತ್ತು. ಕೆಲವೆಡೆ ಶುಭಸಮಾರಂಭಗಳಿದ್ದು ಸಮಸ್ಯೆಗಳಾಗಿತ್ತು. ಮೊದಲ ಮಳೆಯಿಂದಾಗಿ ಕೃಷಿ ಚಟುವಟಿಕೆ ನಿರತ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Comments are closed.