ಕುಂದಾಪುರ: ಹಿಂಸಾತ್ಮಕವಾಗಿ ಓಮ್ನಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ಆರೋಪಿಯನ್ನು ಕುಂದಾಪುರ ಪ್ರೊಬೆಶನರಿ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ ಘಟನೆ ಕುಂದಾಪುರ ತಾಲೂಕಿನ ಕೋಡಿ ರಸ್ತೆಯಲ್ಲಿ ಬುಧವಾರ ನಡೆದಿದೆ.
ಮೂಡುಗೋಪಾಡಿ ನಿವಾಸಿ ಮೊಹಮ್ಮದ್ ರಿಯಾಝ್(38) ಬಂಧಿತ ಆರೋಪಿ.
ಜು.19 ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣಾ ಪ್ರೊಬೇಶನರಿ ಡಿವೈಎಸ್‌ಪಿ ರವಿ ಅವರಿಗೆ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮಧಸೂದನ್, ರಾಮ ಪೂಜಾರಿ ಕರೆ ಮಾಡಿ ಕೋಡಿ ರಸ್ತೆಯಲ್ಲಿ ನೀಲಿ ಬಣ್ಣದ ಮಾರುತಿ ಓಮಿನಿ ವಾಹನದಲ್ಲಿ ಜಾನುವಾರು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಕುಂದಾಪುರ ಠಾಣೆ ಪಿಎಸ್ಐ ವಿನಯ ಎಮ್ ಕೊರ್ಲಹಳ್ಳಿ ಹಾಗೂ ಹೆಡ್ ಕಾನ್ಸ್‌ಟೇಬಲ್ ಅವಿನಾಶ್, ಸಂತೋಷ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದು ಹಳೆಅಳಿವೆ ಕಡೆಯಿಂದ ಲೈಟ್ ಹೌಸ್ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಿದಾಗ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ ಜಾನುವಾರು ಕಂಡುಬಂದಿದೆ. ಇದನ್ನು ಕಳವು ಮಾಡಿದ್ದು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.