ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ಡಾ.ನಮೀತಾ ವಿಯೊನ್ನಾ ಪಾಯಸ್ ಅವರು ಸಂಖ್ಯಾಶಾಸ್ತ್ರ ವಿಭಾಗದಲ್ಲಿ ‘ಮೊಡಲಿಂಗ್ ಆಫ್ ಕ್ರಾಸ್ ಸೆಕ್ಷನಲ್, ರೀಪಿಟೇಡ್ ಮೇಸರ್ಸ್ ಮತ್ತು ಟೈಮ್ ಸೀರಿಸ್ ಡಾಟಾ ಸ್ಟ್ರಚರ್ಸ್’ ಸಂಶೋಧನಾ ಪ್ರಬಂಧಕ್ಕೆ ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದೆ.
ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯದ ಸಂಖ್ಯಾ ಶಾಸ್ತ್ರ ವಿಭಾಗದ ಸಂಗುತ್ತೇವಾರ್ ರಾಜೇಶೇಖರನ್ ಡಾ.ನಳೀನಿ ರವಿಶಂಕರ ಅವರ ಮಾರ್ಗದರ್ಶನ ಪಡೆದುಕೊಂಡಿರುವ ನಮೀತಾ, ಕುಂದಾಪುರದ ಹಿರಿಯ ಪತ್ರಕರ್ತ, ಉದ್ಯಮಿ ವಿನಯ್ ಎ. ಪಾಯಸ್ ಹಾಗೂ ಜಸಿಂತಾ ವಿ. ಪಾಯಸ್ ಅವರ ಪುತ್ರಿಯಾಗಿದ್ದಾರೆ. ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜ್ ಹಾಗೂ ಪೂನಾದ ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿನಿಯಾಗಿದ್ದಾರೆ.
Comments are closed.