ಕರಾವಳಿ

ಮೂಡಬಿದ್ರಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ ಹಲವರಿಗೆ ಗಾಯ

Pinterest LinkedIn Tumblr

ಮೂಡಬಿದಿರೆ: ರಾಜ್ಯ ಹೆದ್ದಾರಿ 70ರ ಮೂಡಬಿದ್ರಿ – ಬೆಳ್ತಂಗಡಿ ರಸ್ತೆಯ ವೇಣೂರು ಸಮೀಪ ಗಾಂಧಿನಗರದಲ್ಲಿ ಮೂಡಬಿದ್ರಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಂಬುಲೆನ್ಸ್ ನಲ್ಲಿ ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ರಾತ್ರಿ 10.30ಕ್ಕೆ ಘಟನೆ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತಯ. ಬಳಿಕ ಕ್ರೇನ್ ಮೂಲಕ ರಸ್ತೆಯನ್ನು ಸಂಚಾರಕ್ಕೆ ಅನುವು ಮಾಡಲಾಯಿತು.

ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.

Comments are closed.