ಉಡುಪಿ: ಆನ್ಲೈನ್ ಸಾಲದ ವಿಚಾರದಲ್ಲಿ ಪೋನ್ ಕರೆಗಳಿಂದ ಬೆದರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.26ರಂದು ಸಂಜೆ ಮಣಿಪಾಲ ಹುಡ್ಕೊ ಕಾಲೋನಿ ಎಂಬಲ್ಲಿ ನಡೆದಿದೆ.
ಶಿವಳ್ಳಿಯ ರಾಘವೆಂದ್ರ ಎ.ಶಾನಭಾಗ್(49) ಆತ್ಮಹತ್ಯೆಗೆ ಶರಣಾದವರು.
ಇವರು ಆನ್ಲೈನ್ನಲ್ಲಿ ಸಾಲ ತೆಗೆದು ಕೊಂಡಿದ್ದರು ಎನ್ನಲಾಗಿದೆ. ಇದರಿಂದ ಫೋನ್ ಕರೆಗಳು ಬರುತ್ತಿದ್ದು ಈ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣ ದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಹಡಿಯ ಮೇಲೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.