ನವದೆಹಲಿ: ಕೇಂದ್ರ ಸರ್ಕಾರವು ಗೃಹಬಳಕೆಯ ಗ್ಯಾಸ್ ಸಿಲಿಂಡರ್ (14.2 ಕೆ.ಜಿ) ಬೆಲೆಯನ್ನು 200 ರೂ. ಇಳಿಕೆ ಮಾಡಿದ್ದು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಜನರು ಮಾತ್ರ ಈ ಕಡಿತದ ಪ್ರಯೋಜನವನ್ನು ಪಡೆಯಲಿದ್ದಾರೆ.
ಈ ಯೋಜನೆಯ ಫಲಾನುಭವಿಗಳಿಗೆ ಈಗಾಗಲೇ 200 ರೂ.ಗಳ ಸಹಾಯಧನ ನೀಡಲಾಗುತ್ತಿದ್ದು ಈಗ ಒಟ್ಟು ಸಬ್ಸಿಡಿ 400 ರೂಪಾಯಿ ಆಗಲಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಉಜ್ವಲಾ ಸ್ಕೀಮ್ ನ ನೋಂದಾಯಿತ ಗ್ರಾಹಕರಿಗೆ ಒಟ್ಟು 400 ರೂಪಾಯಿ ಸಬ್ಸಿಡಿ ದೊರೆಯುವ ಮೂಲಕ ಪ್ರತಿ ಸಿಲಿಂಡರ್ ಬೆಲೆ ಬಹಳಷ್ಟು ಕಡಿಮೆ ಆಗಲಿದೆ.
Comments are closed.