ಕರಾವಳಿ

ಕುಂದಾಪುರದ ಹೆಮ್ಮಾಡಿ‌ ಸಮೀಪದ ಸುಳ್ಸೆಯಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ

Pinterest LinkedIn Tumblr

ಕುಂದಾಪುರ: ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಕಟ್ ಬೆಲ್ತೂರು ಗ್ರಾ‌ಪಂ ವ್ಯಾಪ್ತಿಯ ಸುಳ್ಸೆ ಎಂಬಲ್ಲಿ ಶನಿವಾರ ನಡೆದಿದೆ.

ಹೆಮ್ಮಾಡಿ ಸಮೀಪದ ಸುಳ್ಸೆ ನಿವಾಸಿ ಬಾಬು ಪೂಜಾರಿ ಎನ್ನುವರ ಮನೆ ಸಮೀಪದ ತೋಟದಲ್ಲಿನ ಬಾವಿಗೆ ಚಿರತೆ ಬಿದ್ದಿರುವುದು ಬೆಳಿಗ್ಗೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಇಲಾಖೆಯವರು ಬಾವಿಗೆ ಬೋನು ಇಳಿಸಿ ಚಿರತೆ ಬೋನಿನೊಳಕ್ಕೆ ಹೋದಾಗ ನಾಜೂಕಾಗಿ ಮೇಲಕ್ಕೆತ್ತಿದ್ದಾರೆ. 2 ವರ್ಷ ಪ್ರಾಯದ ಗಂಡು ಚಿರತೆ ರಕ್ಷಣೆಯಾಗಿದ್ದು ಆರೋಗ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ ಮಾರ್ಗದರ್ಶನದಲ್ಲಕ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪ ವಲಯ ಅರಣ್ಯಾಧಿಕಾರಿಗಳಾದ ಉದಯ್, ಶರತ್, ಗುರುರಾಜ್, ದಿಲೀಪ್, ಸುನೀಲ್, ಗೀತಾ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ದೀಪಶ್ರೀ, ಮಾಲತಿ, ಉದಯ, ಬಸವರಾಜ್, ಚಂದ್ರಾವತಿ, ರಾಘವೇಂದ್ರ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು. ಸ್ಥಳೀಯರು ಸಹಕರಿಸಿದರು.

Comments are closed.