ಕರಾವಳಿ

‘ಸಪ್ತಪದಿ’ ಯೋಜನೆ ಮುಂದುವರಿಸಲು ಸರ್ಕಾರಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ

Pinterest LinkedIn Tumblr

ಉಡುಪಿ:‌ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಎ ದರ್ಜೆಯ ದೇವಸ್ಥಾನಗಳ ಮೂಲಕ ಅನುಷ್ಠಾನಗೊಳ್ಳುತ್ತಿದ್ದ ಸಪ್ತಪದಿ ಯೋಜನೆ ಮುಂದುವರಿಸಿ ಜನಸಾಮಾನ್ಯರ ಕುಟುಂಬಗಳ ಮದುವೆಗಳನ್ನು ಸರಳ ಸಾಮೂಹಿಕ ವಿವಾಹದ ಮೂಲಕ ನೆರವೇರಿಸಬೇಕೆಂದು ಒತ್ತಾಯಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮಾಜಿ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಪ್ತಪದಿ ಯೋಜನೆಯಲ್ಲಿ ವಧು ಮತ್ತು ವರನಿಗೆ ಬಟ್ಟೆ ಬರೆ ಮತ್ತು ಇತರ ಖರ್ಚು ವೆಚ್ಚಾಗಳಿಗಾಗಿ ನಿಗದಿತ ಮೊತ್ತ ಮತ್ತು ವಧುವಿಗೆ ಮಾಂಗಲ್ಯ, ಅಲ್ಲದೇ ದೇವಸ್ಥಾನದಲ್ಲೇ ಊಟೋಪಚಾರದ ವ್ಯವಸ್ಥೆ ಇಲಾಖೆಯಿಂದಲೆ ಮಾಡುತ್ತಿದ್ದರಿಂದ ಜನಸಾಮಾನ್ಯರ ಕುಟುಂಬಗಳಿಗೆ ಅದರಲ್ಲೂ ಬಡವರಿಗೆ ಇದೊಂದು ಅರ್ಥಪೂರ್ಣವಾದ ಉಪಯುಕ್ತ ಯೋಜನೆಯಾಗಿದ್ದು, ಸಪ್ತಪದಿಯನ್ನು ಪ್ರಸ್ತುತ ಸರ್ಕಾರ ಮುಂದುವರಿಸಲು ಆದೇಶ ಹೊರಡಿಸಬೇಕಾಗಿ ಪತ್ರದ ಮೂಲಕ ಸರ್ಕಾರವನ್ನು ಮಾಜಿ ಸಚಿವ ಕೋಟ ಒತ್ತಾಯಿಸಿದ್ದಾರೆ.

Comments are closed.