ಕರಾವಳಿ

ಮಹಿಳೆಯರ ಮೇಲೆ ಕೋಟ ಠಾಣೆ ಕ್ರೈಮ್ ಪಿಎಸ್ಐ ದೌರ್ಜನ್ಯ ಆರೋಪ: ಹೋಂ ಮಿನಿಸ್ಟರ್’ಗೆ ದಸಂಸ ಮನವಿ

Pinterest LinkedIn Tumblr

ಉಡುಪಿ: ಕೋಟ ಪೊಲೀಸ್ ಠಾಣೆಯ ಕ್ರೈಮ್ ವಿಭಾಗದ ಪಿಎಸ್ಐ ಸುಧಾಪ್ರಭು ಅಮಾಯಕ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು ಈ ದೌರ್ಜನ್ಯ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಸೇವೆಯಿಂದ ವಜಾಗೊಳಿಸಬೇಕೆಂದು‌ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಿಯೋಗ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರನ್ನು ಉಡುಪಿಯಲ್ಲಿ ಭೇಟಿಯಾಗಿ ಮನವಿ ನೀಡಿದರು.

ದಸಂಸ ಜಿಲ್ಲಾ ಮುಖಂಡರಾದ ಸುಂದರ ಮಾಸ್ತರ್, ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ ತೆಕ್ಕಟ್ಟೆ, ಕುಮಾರ್ ಕೋಟ, ರಾಜು ಬೆಟ್ಟಿನಮನೆ, ಮಂಜುನಾಥ ಹಳಗೇರಿ, ಭಾಸ್ಕರ ಕೆರ್ಗಾಲ್, ಭಾಸ್ಕರ ಮಾಸ್ತರ್, ಶಿವಾನಂದ ಮೂಡಬೆಟ್ಟು, ಶ್ರೀನಿವಾಸ ವಡ್ಡರ್ಸೆ, ಗೋವಿಂದ ಹಳಗೆರಿ, ವಿಜಯ ಗಿಳಿಯಾರು, ಶಿವರಾಮ ಹಳಗೆರಿ, ವಿಠಲ ಉಚ್ಚಿಲ, ಶಿವರಾಮ ಕಾಪು, ರಮೇಶ್ ಪಾಲನ್, ಗಣೇಶ್ ನೆರ್ಗಿ, ಸುರೇಶ ಹಕ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.

Comments are closed.