ಮಂಗಳೂರು: ಸ್ನೇಹಿತರೊಂದಿಗೆ ನದಿಯಲ್ಲಿ ಈಜಾಡಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮರವೂರು ಸೇತುವೆ ಬಳಿ ಸೋಮವಾರ ಸಂಭವಿಸಿದೆ.
ಕೃಷ್ಣಾಪುರ ಚೊಕ್ಕಬೊಟ್ಟು ನಿವಾಸಿ ಶಾಕೀರ್ (29) ಮೃತಪಟ್ಟವರು. ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ಶಾಕೀರ್ ಅವರು ಆಟೋರಿಕ್ಷಾ ಚಾಲಕರಾಗಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.