ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆಯನ್ನು ಉಡುಪಿ ಕೋರ್ಟಿಗೆ ಬುಧವಾರ ಹಾಜರುಪಡಿಸಲಾಗಿದೆ. ಅರೊಪಿಗೆ ಡಿಸೆಂಬರ್ 5 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದೆ.
ವಿಚಾರಣೆ ಮುಗಿಸಿ ಆರೋಪಿಯನ್ನು ಮಲ್ಪೆ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು. ಈ ಮೊದಲು ಪೊಲೀಸರು ನವೆಂಬರ್ 28 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಮಹಜರು ಪ್ರಕ್ರಿಯೆ, ರಿಕವರಿ (ವಸ್ತುಗಳ ವಶಪಡಿಸಿಕೊಳ್ಳುವುದು) ಪೂರ್ಣಗೊಂಡಿರುವ ಕಾರಣ ಅವಧಿಗೂ ಮೊದಲೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಘಟನೆಯ ವಿವರ: ನವೆಂಬರ್ 12ರಂದು ನೇಜಾರಿನ ತೃಪ್ತಿ ಲೇಔಟ್ ನಲ್ಲಿರುವ ಮನೆಗೆ ಬಂದು ತಾಯಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದ.ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ನೂರ್ ಮೊಹಮ್ಮದ್ ಅವರ ಪತ್ನಿ ಹಸೀನಾ (48), ಪುತ್ರಿಯರಾದ ಅಫ್ನಾನ್ (23), ಅಯ್ನಾಝ್ (21), ಪುತ್ರ ಅಸೀಮ್ (14) ಹತ್ಯೆಗೀಡಾಗಿದ್ದರು.
ನೂರ್ ಮೊಹಮ್ಮದ್ ಅವರ ತಾಯಿ ಹಾಜಿರಾಬಿ (70) ಮೇಲೆಯೂ ದಾಳಿ ನಡೆಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಆರೋಪಿ ಬೆಳಗಾವಿಯಲ್ಲಿರುವ ಕುಡಚಿಯ ಸಂಬಂಧಿ ಮನೆಯಲ್ಲಿ ಅಡಗಿ ಇರುವ ಬಗ್ಗೆ ಉಡುಪಿಯ ಡಿವೈಎಸ್‌ಪಿ ನೇತೃತ್ವದ ತಂಡವು ಬೆಳಗಾವಿ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿತ್ತು. ತಕ್ಷಣವೇ ಬೆಳಗಾವಿ ಪೊಲೀಸರು ಮಫ್ತಿಯಲ್ಲಿ ಮನೆ ಸುತ್ತುವರಿದಿದ್ದರು. ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಯನ್ನು ಬಂಧಿಸಿದ್ದರು.
Comments are closed.