ಕರಾವಳಿ

ಉಡುಪಿಯಲ್ಲಿ ಆಭರಣ ಕಳವು ಪ್ರಕರಣ: ಅಂತರ್‌ ಜಿಲ್ಲಾ ಮನೆಗಳ್ಳನ ಬಂಧನ

Pinterest LinkedIn Tumblr

ಉಡುಪಿ: ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಲ್ಲಾರಿನ ತೌಸಿಪ್‌ ಅಹಮದ್‌ (34) ನನ್ನು ಮಲ್ಲಾರಿನಲ್ಲಿ ಮಂಗಳವಾರ ಬಂಧಿಸಲಾಗಿದೆ.

ಆರೋಪಿ ಜೂ. 30ರಂದು 76 ಬಡಗಬೆಟ್ಟುವಿನ ಮನೆಯೊಂದರ ಹಿಂಭಾಗದ ಬಾಗಿಲು ಮುರಿದು ಒಳ ಪ್ರವೇಶಿಸಿ, ಮಲಗುವ ಕೋಣೆಯ ಗೋದ್ರೇಜ್‌ನ ಲಾಕರಿನಲ್ಲಿಟ್ಟಿದ್ದ 5 ಪವನ್‌ ತೂಕದ ಚಿನ್ನದ ಕರಿಮಣಿ ಸರ, ಚಿನ್ನದ ಚೈನ್‌, ನೆಕ್ಲೇಸ್‌, ಉಂಗುರಗಳು, ಬಳೆ ಹಾಗೂ 15,500 ರೂ. ನಗದನ್ನು ಕಳವು ಮಾಡಿದ್ದು, ಕಳವಾದ ಚಿನ್ನಾಭರಣಗಳ ಅಂದಾಜು ಒಟ್ಟು ಮೌಲ್ಯ 8,46,000 ರೂ. ಆಗಿದೆ. ಈ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿ ಮತ್ತು ಸೊತ್ತು ಪತ್ತೆ ಬಗ್ಗೆ ಉಡುಪಿ ನಗರ ಠಾಣಾ ಪೊಲೀಸ್‌ ನಿರೀಕ್ಷಕ ಮಂಜಪ್ಪ ಡಿ.ಆರ್‌., ಪಿಎಸ್‌ಐ ಈರಣ್ಣ ಶಿರಗುಂಪಿ, ಭರತೇಶ್‌ ಕಂಕಣವಾಡಿ, ಪುನೀತ್‌ ಕುಮಾರ್‌ ಮತ್ತು ಸಿಬಂದಿಯನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿದೆ.

ಆರೋಪಿಯಿಂದ 9,00,500 ರೂ. ಮೌಲ್ಯದ 155 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಈಗಾಗಲೇ ಬಂಟ್ವಾಳ, ಪಣಂಬೂರು, ಬಜಪೆ ಕಡೆಗಳಲ್ಲಿ ಹಗಲು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ.

Comments are closed.