ಕುಂದಾಪುರ: ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಮೇಳದವರಿಂದ ದೇವದಾಸ್ ಈಶ್ವರಮಂಗಲ ವಿರಚಿತ ‘ಸತ್ಯಂ ಶಿವಂ ಸುಂದರಂ’ ಯಕ್ಷಗಾನವು ಕುಂದಾಪುರದ ಎರಡನೇ ಯಕ್ಷಕಾಶಿ ಎಂದೇ ಕರೆಯಲ್ಪಡುವ ಕೆಂಚನೂರು ನೆಂಪು ಪೆಟ್ರೋಲ್ ಪಂಪ್ ಬಳಿ ಡಿ.13 ಬುಧವಾರ ರಾತ್ರಿ 9.30ಕ್ಕೆ ಆರಂಭವಾಗಲಿದೆ.
ಸೂಪರ್ ಸ್ಟಾರ್ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲರ 90ನೇ ಕಲಾಕೃತಿ ಇದಾಗಿದ್ದು ಯಕ್ಷಗಾನ ಅಭಿಮಾನಿ ಕ್ಷೇತ್ರವೆನಿಸಿಕೊಂಡ ಕೆಂಚನೂರಿನಲ್ಲಿ ಇಂದು ಪ್ರದರ್ಶನಗೊಳ್ಳಲಿದೆ. ಕಡಿಮೆ ಅವಧಿಯಲ್ಲಿ ಅಪಾರ ಜನಮನ್ನಣೆಗೆ ಪಾತ್ರವಾಗಿ ಹೌಸ್‌ಫುಲ್ ದಾಖಲೆ ಮಾಡಿದ ಪ್ರಸಂಗ ಇದಾಗಿದೆ. ಖ್ಯಾತ ಭಾಗವತ ಚಂದ್ರಕಾಂತ ರಾವ್ ಮೂಡುಬೆಳ್ಳೆಯವರ ಭಾಗವತಿಕೆಯಿದೆ. ಶಶಿಕಾಂತ್ ಶೆಟ್ಟಿ ಕಾರ್ಕಳ, ನಾಗರಾಜ ಕುಂಮ್ಕಿಪಾಲ್, ಶಂಕರ ದೇವಾಡಿಗ ಉಳ್ಳೂರು, ಸ್ತ್ರೀ ಪಾತ್ರದಲ್ಲಿ, ಪ್ರಸನ್ನ ಶೆಟ್ಟಿಗಾರ್ ಮಂದರ್ತಿ, ಈಶ್ವರ್ ನಾಯ್ಕ್ ಮಂಕಿ ವಿಶಿಷ್ಟ ಪಾತ್ರದ ಕಾಣಿಸಿಕೊಳ್ಳುತ್ತಿದ್ದಾರೆ. ರಾಜೇಶ್ ಭಂಡಾರಿ, ಚಂದ್ರಹಾಸ ಗೌಡ, ಸನ್ಮಯ್ ಭಟ್, ಪ್ರವೀಣ್ ಗಾಣಿಗ ಕೆಮ್ಮಣ್ಣು, ಮಿಂಚಿನ ಪ್ರವೇಶವಿರಲಿದೆ. ಮಹಾಬಲೇಶ್ವರ ಭಟ್ ಕ್ಯಾದಿಗಿ, ಕಾರ್ತಿಕ್ ರಾವ್ ಪಾಂಡೇಶ್ವರ ಅವರ ಹಾಸ್ಯ ಆದಿಯಿಂದ ಅಂತ್ಯದವರೆಗೆ ಯಕ್ಷಾಭಿಮಾನಿಗಳನ್ನು ರಂಜಿಸಲಿದೆ. ಯಕ್ಷ ರಂಗದ ಯುವ ಪ್ರತಿಭೆಗಳಾದ ರತ್ನಾಕರ್ ಸರಳಗಿ, ರಾಜೇಶ್ ಭಂಡಾರಿ ಪಾತ್ರವಿರಲಿದೆ.
ಚೆಂಡೆಯ ಗಂಡುಗಲಿ ಖ್ಯಾತಿಯ ಕೋಟ ಶಿವಾನಂದ, ಮದ್ದಳೆ ಮಾಂತ್ರಿಕ ಎನ್.ಜಿ ಹೆಗಡೆ ಯಲ್ಲಾಪುರದವರ ಜುಗಲ್ ಬಂದಿಯಿರಲಿದೆ. ಅರ್ಧ ಚಂದ್ರಾಕೃತಿಯ ವಿದ್ಯುತ್ ದೀಪಾಲಂಕೃತ ಭವ್ಯ ರಂಗವೇದಿಕೆಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ರವಿ ಗಾಣಿಗ ಕೆಂಚನೂರು, ದೀಪಕ್ ಕುಮಾರ್ ಶೆಟ್ಟಿ ವಂಡ್ಸೆ ಸಂಯೋಜಕತ್ವದಲ್ಲಿ ‘ಸತ್ಯಂ ಶಿವಂ ಸುಂದರಂ’ ಪ್ರದರ್ಶನಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ: ರವಿ ಗಾಣಿಗ ಕೆಂಚನೂರು- 9900812414.
ದೀಪಕ್ ಕುಮಾರ್ ಶೆಟ್ಟಿ ವಂಡ್ಸೆ- 9880461036
ದಿನಕರ ಶೆಟ್ಟಿ- 9480373508
ರಾಧಾಕೃಷ್ಣ ಗಾಣಿಗ-9972651114
Comments are closed.