ಕರಾವಳಿ

ಸೈಬರ್‌ ಕ್ರೈಂನವರೆಂದು ನಂಬಿಸಿ ತಮಿಳುನಾಡು ಮೂಲದ ವ್ಯಕ್ತಿಗೆ 15.5 ಲಕ್ಷ ದೋಖಾ..!

Pinterest LinkedIn Tumblr

ಉಡುಪಿ: ಸೈಬರ್‌ ಕ್ರೈಂನವರೆಂದು ನಂಬಿಸಿ ತಮಿಳುನಾಡು ಮೂಲದ ಟಿಯಾಗು (32) ಅವರ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ. 17ರಂದು 10.40ರ ಸಮಯಕ್ಕೆ ಟಿಯಾಗು ಮೊಬೈಲ್‌ಗೆ 917716341788ನೇ ನಂಬರಿನಿಂದ ಫೆಡ್‌ಎಕ್ಸ್‌ ಕೊರಿಯರ್‌ ಎಂಬ ಕಂಪೆನಿಯಿಂದ ಕರೆ ಬಂದಿತ್ತು. ನೀವು ಮುಂಬಯಿನಿಂದ ಇರಾನ್‌ಗೆ ಕೊರಿಯರ್‌ ಮಾಡಿದ ಕೊರಿಯರ್‌ ಡೆಲಿವರಿ ಆಗಲಿಲ್ಲ ಎಂದು ಹೇಳಿದರು. ಆಗ ತಾನು ಯಾವುದೇ ಕೊರಿಯರ್‌ ಆರ್ಡರ್‌ ಮಾಡಲಿಲ್ಲ ಕೊರಿಯರ್‌ನಲ್ಲಿ ಏನಿದೆ ಟಿಯಾಗು ಮರು ಪ್ರಶ್ನಿಸಿದ್ದರು. ನಿಮ್ಮ ಪಾರ್ಸೆಲ್‌ನಲ್ಲಿ ಅಕ್ರಮ ಡ್ರಗ್ಸ್‌ ಇದೆ ಎಂದು ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದ.

ಒಂದು ನಿಮಿಷದ ಅನಂತರ ಇನ್ನೊರ್ವ ವ್ಯಕ್ತಿ ಮಾತನಾಡಿ ನಿಮ್ಮ ಅಕೌಂಟ್‌ ಚೆಕ್‌ ಮಾಡಬೇಕಿದೆ ಎಂದು ಹೇಳಿ ಟಿಯಾಗು ಅವರನ್ನು ನಂಬಿಸಿ ಐಸಿಐಸಿಐ ಅಪ್ಲಿಕೇಶನ್‌ನಲ್ಲಿರುವ ಪ್ರಿ ಅಪ್ರೋವಡ್‌ ಲೋನ್‌ಗೆ ಹೋಗಿ ಪರ್ಸನಲ್‌ ಲೋನ್‌ಗೆ ಕ್ಲಿಕ್‌ ಮಾಡಲು ಹೇಳಿದ್ದರು. ಆಗ 15,62,921 ರೂ. ಹಣ ಅವರ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದು, ಅನಂತರ ಆ ವ್ಯಕ್ತಿಯು ಸೈಬರ್‌ ಕ್ರೈಂನವರು ಎಂದು ನಂಬಿಸಿ ಅಕೌಂಟ್‌ ನಂಬರ್‌ ನೀಡಿ ಖಾತೆಗೆ ಅವರ ಅಕೌಂಟ್‌ನಲ್ಲಿದ್ದ ಮೊತ್ತವನ್ನು ಅಕೌಂಟ್‌ಗೆ ಆರ್‌ಟಿಜಿಎಸ್‌ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಟಿಯಾಗು ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ.

Comments are closed.