ಕರಾವಳಿ

ಕುಂದಾಪುರದಲ್ಲಿ ಬೈಕ್ ಕಳವುಗೈದ ಆರೋಪಿಯನ್ನು ಬಂಧಿಸಿದ ಪೊಲೀಸರು..!

Pinterest LinkedIn Tumblr

ಕುಂದಾಪುರ: ನಗರದ ಶಾಸ್ತ್ರಿ ವೃತ್ತದ ಬಳಿಯ ಕಾಲೇಜು ರಸ್ತೆಯಲ್ಲಿಯಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡದ ಬಳಿಯಲ್ಲಿ ಅನಂತ ಎನ್ನುವರು ನ.26ರಂದು ನಿಲ್ಲಿಸಿದ್ದ ಹೀರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್‌ ಬೈಕನ್ನು ಕದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಖಂಬದಕೋಣೆ ಗುಡ್ಡಿಮನೆ ನಿವಾಸಿ ರಂಜಿತ್ (25) ಬಂಧಿತ ಆರೋಪಿ. ಕಳವು ಮಾಡಿದ ಬೈಕನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನೆಲೆ: ಅನಂತ್ ಅವರು ಬೈಕ್ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದು ಸಂಜೆ ವೇಳೆಗೆ ವಾಪಾಸು ಬಂದಾಗ ಬೈಕ್‌ ಪಾರ್ಕಿಂಗ್‌ ಮಾಡಿದ ಸ್ಥಳದಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿ ಸಿಗದಿದ್ದಾಗ ‌ಬೈಕ್ ಕಳವಾದ ಬಗ್ಗೆ ಕುಂದಾಪುರ ಠಾಣೆಗೆ ದೂರು ನೀಡಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕ ಯು.ಬಿ ನಂದಕುಮಾರ್‌, ಪಿಎಸ್ಐಗಳಾಸ ವಿನಯ ಕೊರ್ಲಹಳ್ಳಿ, ಪ್ರಸಾದ್ ಕುಮಾರ್.ಕೆ ಹಾಗೂ ಸಿಬ್ಬಂದಿಗಳಾದ ಸಂತೋಷ ಕುಮಾರ್, ಶ್ರೀಧರ್, ರಾಮ ಹಾಗೂ ಬೈಂದೂರು ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳು ಆರೋಪಿ ರಂಜಿತ್ ಎಂಬಾತನನ್ನು ಬೈಂದೂರು ಜಂಕ್ಷನ್‌ ಬಳಿಯಲ್ಲಿ ಬಂಧಿಸಿದ್ದು ಕಳವು ಮಾಡಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅರೋಪಿ ಮೇಲೆ ವಿವಿಧ ಠಾಣೆಗಳಲ್ಲಿ ಸುಮಾರು 5 ಕ್ಕೂ ಹೆಚ್ಚು ಬೈಕ್‌ ಕಳ್ಳತನ ಪ್ರಕರಣಗಳು ದಾಖಲಾಗಿದೆ ಎಂದು ತನಿಖೆ ವೇಳೆ ತಿಳಿದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.