ಕರಾವಳಿ

ಸ್ಕೂಟಿ ಕಳವು ಪ್ರಕರಣ; ಆರೋಪಿಯನ್ನು ಬಂಧಿಸಿದ ಬೈಂದೂರು ಪೊಲೀಸರು..!

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೋಟೆಲೊಂದರ ಎದುರು ನಿಲ್ಲಿಸಿದ್ದ ಸ್ಕೂಟಿ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಮೂಲದ ಲಕ್ಷ್ಮಣ್ ಅಂಬಾಜಿ (26) ಬಂಧಿತ ಆರೋಪಿ. ಬಂಧಿತನಿಂದ ಕಳವು ಮಾಡಿದ್ದ ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ಜ.2 ರಂದು ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೋಟೆಲ್ ಎದುರು ಆನಂದ ಎಂಬವರು ನಿಲ್ಲಿಸಿದ ತಮ್ಮ ಸ್ಕೂಟಿಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಜ.25 ರಂದು ಆರೋಪಿತನಾದ ಲಕ್ಷ್ಮಣ್ ಅಂಬಾಜಿ ಗುಳೇದಗುಡ್ಡ ಎಂಬಾತನನ್ನು ಹಾವೇರಿ ಜಿಲ್ಲೆಯ ಬಂಕಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣವೊಂದು ದಾಖಲಾಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್, ಠಾಣೆ ಸಿಬ್ಬಂದಿಗಳಾದ ಸುಜಿತ್ ಕುಮಾರ್, ಮಾಳಪ್ಪ ದೇಸಾಯಿ ಮತ್ತು ಸಂತೋಷ್ ಕಾರ್ಯಾಚರಣೆ ನಡೆಸಿದ್ದರು.

Comments are closed.