ಕುಂದಾಪುರ: ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೊಯಮುತ್ತೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು 15 ನೇ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಕೋಟ ಎಜುಕೇರ್ ಸಂಸ್ಥೆಯ ವಿದ್ಯಾರ್ಥಿಯಾದ ವೈಷ್ಣವ್ ಎಸ್. ನಾಯ್ಕ್ ಇವರು ಪ್ರಥಮ ಹಂತದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಜ. 28ರಂದು ತಮಿಳುನಾಡಿನ ಕೊಯಮುತ್ತೂರಿನಲ್ಲಿ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು 15 ನೇ ವೇದಿಕ್ ಮಾಥ್ಸ್ ಸ್ಪರ್ಧೆ ನಡೆದಿದೆ. ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕೆ.ಬಿ ಹಾಗೂ ಸುಪ್ರೀತಾ ಎಸ್. ಮೊಗವೀರ ಇವರು ತರಬೇತಿ ನೀಡಿದ್ದು, ಕೋಟ ಎಜುಕೇರ್ ಸಂಸ್ಥೆ ಸ್ಥಾಪಕ ಅಧ್ಯಕ್ಷ ಚೇತನ್ ಎಮ್ ಇವರು ಸಹಕಾರ ನೀಡಿದ್ದಾರೆ. ವೈಷ್ಣವ್ ಎಸ್ ನಾಯ್ಕ್ ಇವರು ಕುಂಭಾಶಿ ನಿವಾಸಿ ಸತ್ಯ ಎ. ಮತ್ತು ದೀಪಿಕಾ ದಂಪತಿಗಳ ಸುಪುತ್ರನಾಗಿದ್ದು, ಕುಂದಾಪುರದ ಓಕುಡ್ ಇಂಡಿಯನ್ ಸ್ಕೂಲ್ನ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
Comments are closed.