ಫೆ.8ಕ್ಕೆ ಸೌದಿಯಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
ಸೌದಿಅರೆಬಿಯಾ: ಕನ್ನಡಿವರ್ಲ್ಡ್ ಸುದ್ದಿ ಜಾಲತಾಣದಲ್ಲಿ ಪ್ರಕಟವಾದ ವಿಶ್ವ ಮಾನ್ಯ ಅಂತರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯವರು ಸ್ಪಷ್ಟನೆ ನೀಡಿದ್ದಾರೆ. ಸಂಪೂರ್ಣ ಕಾರ್ಯಕ್ರಮಗಳ ವಿವರದ ಬಗ್ಗೆ ಸಮಿತಿಯವರು ಮಾಹಿತಿ ನೀಡಿದ್ದಾರೆ.
ಸಮ್ಮೇಳನದ ಮೂಲಕ ಎನ್.ಆರ್.ಐ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರುವುದು. ಅನಿವಾಸಿ ಭಾರತೀಯರಾಗಿ ಸೌದಿಯಲ್ಲಿ ಬಹಳಷ್ಟು ಸಮಾಜಿಕ ಸೇವೆ ಮಾಡಿದವರನ್ನು ಗುರುತಿಸುವ ಬಗ್ಗೆ ಸರಕಾರಕ್ಕೆ ಮನವಿ ಮಾಡುವುದು ಸಹಿತ ಬಹಳಷ್ಟು ವಿಚಾರಗಳು ಮಾತ್ರವೇ ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದವರು ಸ್ಪಷ್ಟನೆ ಪಡಿಸಿದ್ದಾರೆ.
ಫೆ.8ಕ್ಕೆ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಮತ್ತು ಅನಿವಾಸಿ ಕನ್ನಡಿಗರ ವೇದಿಕೆ ಸೌದಿ ಅರೇಬಿಯ ಒಂದಗೂಡಿ ಮೊದಲ ಬಾರಿಗೆ ಸೌದಿ ಅರೇಬಿಯದ ದಮಾಮ್ ನಲ್ಲಿ ಫೆಬ್ರವರಿ 8 ರಂದು 17 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದ್ದು ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ವಿಧಾನಸಭೆ ಸಭಾಪತಿಗಳಾದ ಯು.ಟಿ ಖಾದರ್, ಗೃಹಸಚಿವರಾದ ಡಾ.ಜಿ ಪರಮೇಶ್ವರ್, ಸೌದಿ ಅರೆಬಿಯಾ ರಿಯಾದ್ ಭಾರತೀಯ ರಾಯಭಾರಿಗಳಾದ ಡಾ. ಸುಹೇಲ್ ಅಜಾಜ್ ಖಾನ್, ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ರಹೀಮ್ ಖಾನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡುರಾವ್, ಸಹಕಾರ ಖಾತೆ ಸಚಿವರಾದ ಕೆ.ಎನ್ ರಾಜಣ್ಣ, ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷರಾದ ಡಾ. ಆರತಿಕೃಷ್ಣ, ವಿಧಾನಪರಿಷತ್ ಸದಸ್ಯರಾದ ಬಿಎಂ ಫಾರುಖ್, ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೋ.ಎಸ್.ಜಿ ಸಿದ್ದರಾಮಯ್ಯ, ಡೈಜಿವರ್ಡ್ ಗ್ರೂಫ್ ಆಪ್ ಮೆಡಿಯಾದ ವಾಲ್ಟರ್ ನಂದಳಿಕೆ, ಅಲ್ ಮುಝೈನ್ ಗ್ರೂಫ್ನ ಜಕರಿಯಾ ಬಜ್ಪೆ, ಎಕ್ಸ್ಪರ್ಟೈಸ್ ಗ್ರೂಪ್ನ ಶೇಖ್ ಕರ್ನಿರೆ, ಅಲ್ ರಕ್ವಾನಿ ಗ್ರೂಫ್ನ ಇಬ್ರಾಹಿಂ ಹುಸೇನ್, ಮಿಗ್ ಅರೆಬಿಯಾ ಜನರಲ್ ಮ್ಯಾನೇಜರ್ ಅಬ್ದುಲ್ ನಿಶಾನ್, ಸೌದಿ ಅರೆಬಿಯಾ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ-2004 ಸ್ಥಾಪಕಧ್ಯಕ್ಷ ಇಂ. ಕೆ.ಪಿ. ಮಂಜುನಾಥ್ ಸಾಗರ್ ಮಂಗಳೂರು, 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಫಿಕ್ ಸೂರಿಂಜೆ ಉಪಸ್ಥಿತರಿರಲಿದ್ದಾರೆ ಎಂದು ಸಮಿತಿ ತಿಳಿಸಿದೆ.
ವಿವಿಧ ಕಾರ್ಯಕ್ರಮಗಳ ಆಯೋಜನೆ:
ಪ್ರಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಕರುನಾಡ ಕಲೆ ಮತ್ತು ಸಂಸ್ಕೃತಿಗಳ ಭವ್ಯ ಅನಾವರಣಗೊಳ್ಳಲಿದೆ.
ನೆರೆದವರಿಗೆ ಮನೋರಂಜನೆ ನೀಡಲು ಹಾಗೂ ನಕ್ಕು ನಗಿಸಲು ಕರ್ನಾಟಕ ಹಾಗೂ ಗಲ್ಫ್ನ ಇತರೆ ರಾಷ್ಟ್ರಗಳಿಂದ ಸುಮಾರು ನೂರು ಖ್ಯಾತ ಕಲಾವಿದರು ಆಗಮಿಸಲಿದ್ದಾರೆ. ಪ್ರಸಿದ್ಧ ಕಲಾವಿದರಿಂದ ಮ್ಯಾಜಿಕ್ ಮತ್ತು ಸ್ಟಾಂಡ್ ಅಪ್ ಕಾಮಿಡಿ ನಡೆಯಲಿದೆ. ಖ್ಯಾತ ಕಲಾವಿದರಿಂದ ಕಥಕ್ ಹಾಗೂ ಕನ್ನಡ ಗೀತೆಗಳು ರಂಜಿಸಲಿದೆ. ರಂಗ ಸಂಸ್ಕೃತಿ ಬೆಂಗಳೂರು ತಂಡದಿಂದ ನಗೆ ನಾಟಕವಿದೆ. ಬ್ಯಾರಿ ಸಂಪ್ರದಾಯಿಕ ದಫ್ ನೃತ್ಯ, ಶಾಸ್ತ್ರೀಯ ನೃತ್ಯ ಭರತನಾಟ್ಯ, ಕರಾವಳಿಯ ಜನಪ್ರಿಯ ಹುಲಿ ವೇಷ ಕುಣಿತ ( ಬಹರೈನ್ ಬಿಲ್ಲವಾಸ್) ಮತ್ತು ತುಳುನಾಡಿನ ಪ್ರಸಿದ್ಧ ಹಾಸ್ಯ ದಿಗ್ಗಜರಿಂದ ಹಾಸ್ಯ ಪ್ರಹಸನ ನಡೆಯಲಿದೆ.
ಕರ್ನಾಟಕದಿಂದ ಗಣ್ಯರು, ಕನ್ನಡ ಪರ ಚಿಂತಕರು, ಕಲಾವಿದರು, ಕವಿಗಳು ಮತ್ತು ಸಂಪನ್ಮೂಲ ವಕ್ತಿಗಳ ಸಂಸ್ಕೃತಿಕ ನಿಯೋಗ ಆಗಮಿಸಲಿದೆ. ಬಹುಭಾಷ ಕವಿಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ ಮುಂತಾದ ಕಾರ್ಯಕ್ರಮಗಳು ಜರುಗಲಿದೆ ಎಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.