ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಭೀಮಘರ್ಜನೆ ತಾಲೂಕು ಸಮಿತಿ ಕುಂದಾಪುರ ಹಾಗೂ ವಿವಿಧ ಗ್ರಾಮ ಶಾಖೆಗಳ ಸಹಭಾಗಿತ್ವದಲ್ಲಿ ರವಿವಾರ ಡಾ. ಬಿ. ಆರ್. ಅಂಬೇಡ್ಕರ್ ಜನುಮ ಜಯಂತಿಯನ್ನು ಸಿದ್ಧಾಪುರ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಕುಂದಾಪುರದ ಯುವ ವಕೀಲ ಜಗದೀಶ್ ರಾವ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಇಂದಿನ ಪೀಳಿಗೆ ಶಿಕ್ಷಣವನ್ನು ಪಡೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಕಿವಿಮಾತನ್ನ ಹೇಳಿದರು.
ತೆಂಗಿನ ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸಂಚಾಲಕರಾದ ಚಂದ್ರ ಅಲ್ತಾರ್ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಜಾತಿ ವರ್ಗದವರು ಹಬ್ಬವಾಗಿ ಆಚರಣೆ ಮಾಡಬೇಕು, ಚುನಾವಣೆ ನೀತಿ ಸಂಹಿತೆಯ ಯಾವುದೇ ಕಟ್ಟುಪಾಡುಗಳನ್ನು ಸರ್ಕಾರ ಹಾಕಬಾರದು ಎಂದು ವಿನಂತಿಸಿದರು.
ಕುಂದಾಪುರ ತಾಲೂಕು ಸಂಚಾಲಕ ಮಂಜುನಾಥ.ಜಿ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐದು ಜನ ಸಾಧಕರಾದ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಕೀರ್ತನ್, ಶಿಕ್ಷಣ ಕ್ಷೇತ್ರದಲ್ಲಿ ರಶ್ಮಿತಾ, ಮಂಜು ಹಳ್ಳಿಹೊಳೆ, ಅಂತುನಾಯ್ಕ್ ಹೊಸಂಗಡಿ, ಸಾಮಾಜಿಕ ಹೋರಾಟಗಾರ ಮಹಾದೇವ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ರಾಘು ಶಿರೂರು, ಶಶಿ ಬಳ್ಕೂರು, ಸುಧಾಕರ್ ಸುರ್ಗೋಳಿ, ಜಗದೀಶ್ ಗಂಗೊಳ್ಳಿ, ಆನಂದ್ ಕಾರೂರು, ಚಂದ್ರ ಕಾಸನಕಟ್ಟೆ, ಗಣೇಶ್ ಆಜ್ರಿ, ಸತ್ಯನಾರಾಯಣ ಬೆಳ್ಳಾಲ, ಗಣೇಶ್, ಸಂತೋಷ, ಶೇಖರ್ ಆರ್ಡಿ, ರಾಘವೇಂದ್ರ ನಾಯ್ಕ್, ಸಂದೇಶ ನಾಡ, ಅಶೋಕ್ ಕರ್ಕಂಜೆ, ಮಂಜುನಾಥ್ ಅಜ್ರಿ, ಮನು ಆಜ್ರಿ, ನೇತ್ರಾವತಿ, ರತ್ನ ಬೆಳ್ಳಾಲ, ಚಂದ್ರಾವತಿ ಆರ್ಡಿ ಉಪಸ್ಥಿತರಿದ್ದರು.
ನೀಲಿ ಸೇನೆ ಕಮಾಂಡರ್ ಗೌತಮ್ ತಲ್ಲೂರು ಸ್ವಾಗತಿಸಿದರು. ಸತೀಶ್ ಸೂರ್ಗೋಳಿ ಕಾರ್ಯಕ್ರಮ ನಿರೂಪಿಸಿದರು.
Comments are closed.