UAE

ಹೆತ್ತವರ 58ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದುಬೈನಲ್ಲಿ ರಕ್ತದಾನ ಆಯೋಜಿಸಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ

Pinterest LinkedIn Tumblr

ದುಬೈ: ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತಮ್ಮ ತಂದೆ-ತಾಯಿಯಾದ ಸರೋಜಿನಿ ಶೆಟ್ಟಿ ಮತ್ತು ನಾರಾಯಣ ಶೆಟ್ಟಿಯವರ ಐವತ್ತೆಂಟನೇ ವರ್ಷದ ಮದುವೆಯ ಶುಭದಿನದಂದು (ಮೆ.22) ಆಯೋಜಿಸಿದ 13 ನೇ ವರ್ಷದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

ನಗರದ ಅಲ್ ಗಿಸಾಸ್ ನ ಫಾರ್ಚೂನ್ ಪ್ಲಾಝದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಫಾರ್ಚೂನ್ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು, ಶೆಟ್ಟಿಯವರ ಸ್ನೇಹಿತ ಮಿತ್ರರು,ಅಭಿಮಾನಿಗಳು, ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಕ್ತದಾನ ಮಾಡಿ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದರು.

ದುಬೈ ಹೆಲ್ತ್ ಕೇರ್ ನ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಯುಎಇ ತುಳುನಾಡಿನ ಕನ್ನಡ ಸಂಘ ಸಂಸ್ಥೆಗಳ ರಕ್ತದಾನ ಸಂಘಟಕ ಬಾಲಕೃಷ್ಣ ಸಾಲಿಯಾನ್, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಸಂಸ್ಥೆಯ ಸಿಬ್ಬಂದಿ ವಸಂತ ಶೆಟ್ಟಿ, ಸಂದೇಶ್ ಕುಮಾರ್ ಶಿಬಿರದ ನೇತ್ರತ್ವ ವಹಿಸಿದ್ದರು.

ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ತನ್ನ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹನ್ನೆರಡನೆಯ ವರ್ಷದ ಅದ್ದೂರಿಯಾಗಿ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಕೃತಜ್ಞತೆ ತಿಳಿಸಿದರು.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Comments are closed.