ಕರಾವಳಿ

ಕರಾವಳಿಯಲ್ಲಿ ಕೋಟ, ಚೌಟ, ಉ.ಕ.ದಲ್ಲಿ ಕಾಗೇರಿ ಮುನ್ನಡೆ; ಹಾಸನದಲ್ಲಿ ಪ್ರಜ್ವಲ್ ರೇವಣ್ಣ-ಶ್ರೇಯಸ್ ಪಟೇಲ್ ಜಿದ್ದಾಜಿದ್ದಿ..!

Pinterest LinkedIn Tumblr

ಮಂಗಳೂರು/ ಉಡುಪಿ : ಲೋಕಸಭಾ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ-72972 (ಮುನ್ನಡೆ-29456), ಜಯ ಪ್ರಕಾಶ್ ಹೆಗ್ಡೆ-43516 ಮತಗಳನ್ನು ಆರಂಭಿಕ ಸುತ್ತಿನಲ್ಲಿ ಪಡೆದಿದ್ದಾರೆ.

ಉತ್ತರಕನ್ನಡದಲ್ಲಿ ಕಾಗೇರಿ ಮನ್ನಡೆ ಸಾಧಿಸಿದ್ದಾರೆ. ಮಂಗಳೂರಿನಲ್ಲಿ ಅಂಚೆ‌ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ. ಚೌಟ 12697 ಮತ ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ 6474 ಮತ ಪಡೆದಿದ್ದಾರೆ.

ಹಾಸನದಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ನ ಶ್ರೇಯಸ್ ಪಟೇಲ್, ಜೆಡಿಎಸ್ ನ ಪ್ರಜ್ವಲ್ ರೇವಣ್ಣ ನಡುವೆ ಬಾರೀ ಪೈಪೋಟಿ ನಡೆಯುತ್ತಿದೆ.

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್, ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪಗೆ ಬಾರೀ ಹಿನ್ನಡೆಯಾಗುತ್ತಿದೆ.

Comments are closed.