ಕರಾವಳಿ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಜರೂರು ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲು ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮನವಿ

Pinterest LinkedIn Tumblr

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2024-25ನೇ ಸಾಲಿಗೆ ವಿದ್ಯಾರ್ಥಿಗಳ ಶಾಲಾ ಹಾಗೂ ಕಾಲೇಜು ದಾಖಲಾತಿ ನಡೆಯುತ್ತಿದ್ದು, ಸರಕಾರಿ ವಸತಿ ನಿಲಯಗಳಲ್ಲಿ ದಾಖಲಾತಿ ಪ್ರಾರಂಭವಾಗಿಲ್ಲ. ಇದರಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದ್ದು, ಐದರಿಂದ 10ನೇ ತರಗತಿ ವಿದ್ಯಾರ್ಥಿಗಳಾಗಿರುವುದರಿಂದ ಪಿ.ಜಿ ಮಾಡಿ ಸಹ ಅವರನ್ನು ಇಡಲು ಸಾಧ್ಯವಾಗದ ಕಾರಣ ಅವರ ಶಾಲೆಗಳಲ್ಲಿ ದಾಖಲಾಗಿರುವುದರಿಂದ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ಶಾಲೆ ಪ್ರಾರಂಭವಾದರೂ ಸಹ ಈವರೆಗೂ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಆನ್ಲೈನ್ ದಾಖಲಾತಿ ಪ್ರಾರಂಭವಾಗಿಲ್ಲ.

ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳಲ್ಲಿ ಸಹ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ತರಗತಿಗಳು ಪ್ರಾರಂಭವಾಗಿದ್ದು ವಸತಿ ನಿಲಯದ ವ್ಯವಸ್ಥೆ ವಿಳಂಬವಾಗುತ್ತಿರುವುದರಿಂದ ದೂರದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ. ಆರ್ಥಿಕವಾಗಿ ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು ಪಿ.ಜಿಯಲ್ಲಿ ಇರಲು ಆರ್ಥಿಕ ಸಂಕಷ್ಟ ಪಡುತ್ತಿದ್ದು ವಸತಿ ನಿಲಯದ ಆನ್ಲೈನ್ ಅರ್ಜಿಯು ಪ್ರಾರಂಭವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಮೆಟ್ರಿಕ್ ಪೂರ್ವ ದಾಖಲಾತಿಗೆ ಸಂಬಂಧಿಸಿದಂತೆ ದಾಖಲಾತಿ ಪ್ರಕ್ರಿಯೆ ಏಪ್ರಿಲ್ 15 ರ ನಂತರ ಹಾಗೂ ಪಿ.ಯು.ಸಿ. ಮತ್ತು ಪದವಿ ಮತ್ತು ಪದವಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯು ಮೇ ತಿಂಗಳಲ್ಲಿ ಪ್ರಾರಂಭದಲ್ಲಿಯೇ ಆರಂಭವಾದಾಗ ಮಾತ್ರ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಾಗೂ ಆನ್ಲೈನ್ ಪ್ರಕ್ರಿಯೆಯು ರಾಜ್ಯ ಕೇಂದ್ರೀಕೃತವಾಗಿರುವುದರಿಂದ ತಾಲೂಕು ಮಟ್ಟದಲ್ಲಿ ಅಥವಾ ಮ್ಯಾನ್ ವೆಲ್ ಮುಖಾಂತರ ಹಂಚಿಕೆ ಮಾಡಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಆದುದರಿಂದ ಈ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಜರೂರು ವಸತಿ ನಿಲಯಗಳಲ್ಲಿ ದಾಖಲಾತಿಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡುವಂತೆ. ಹಿಂದುಳಿದ ವರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪರವರಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು ಮನವಿಯನ್ನು ಸಲ್ಲಿಸಿದರು.

Comments are closed.